ಅಮೆಜಾನ್ ಒರಿಜಿನಲ್ ಸೀರೀಸ್ ‘ಪಾತಾಲ್ ಲೋಕ್‍’ ಟ್ರೇಲರ್ ಬಿಡುಗಡೆ

 

ಸುದೀಪ್ ಶರ್ಮ ರಚನೆಯ ಪಾತಾಲ್ ಲೋಕ್‍ನಲ್ಲಿ ಜೈದೀಪ್ ಅಹ್ಲವತ್, ನೀರಜ್ ಕಬಿ, ಗುಲ್ ಪನಾಗ್, ಮತ್ತು ಅಭಿಷೇಕ್ ಬ್ಯಾನರ್ಜಿ ಮುಂತಾದವರು ನಟಿಸಿದ್ದಾರೆ. ಅವಿನಾಶ್ ಅರುಣ್ ನಿರ್ದೇಶಿಸಿ ಕ್ಲೀನ್ ಸ್ಲೇಟ್ ಫಿಲ್ಮ್‍ಝ್ ತಯಾರಿಕೆಯ ಈ 9-ಭಾಗಗಳ ಅಮೆಜಾನ್ ಒರಿಜಿನಲ್ ಸೀರೀಸ್‍ಅನ್ನು ಪ್ರೈಮ್ ಸದಸ್ಯರು, ಮೇ 15ರಿಂದ 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೀಕ್ಷಿಸಬಹುದು.

ಪ್ರೈಂ ನೀಡುತ್ತದೆ ಅದ್ಭುತ ಮೌಲ್ಯ, ಇತ್ತೀಚಿನ ಮತ್ತು ಪ್ರತ್ಯೇಕ ಚಲನಚಿತ್ರ, ಟಿವಿ ಕಾರ್ಯಕ್ರಮ, ಸ್ಟಾಂಡಪ್ ಹಾಸ್ಯ, ಅಮೆಜಾನ್ ಒರಿಜಿನಲ್ಸ್, ಜಾಹೀರಾತು ರಹಿತ ಸಂಗೀತ ಪ್ರೈಂ ಮ್ಯೂಸಿಕ್ ಮೂಲಕ, ಗಳ ಅನಿಯಮಿತ ಸ್ಟ್ರೀಮಿಂಗ್, ಭಾರತದ ಅತಿದೊಡ್ಡ ಪ್ರಮಾಣದ ವಸ್ತುಗಳ ಉಚಿತ ಕ್ಷಿಪ್ರ ಬಟವಾಡೆ, ಉನ್ನತ ಡೀಲ್ ಗಳಿಗೆ ಪ್ರವೇಶ, ಪ್ರೈಂ ರೀಡಿಂಗ್ ನೊಂದಿಗೆ ಅನಿಯಮಿತ ಪುಸ್ತಕಗಳು, ಎಲ್ಲಾ ರೂ. 129 ಪ್ರತಿ ತಿಂಗಳಿಗೆ

ಭಾರತ, ಒಚಿಥಿ 05, 2020 – ಅಮೆಜಾನ್ ಪ್ರೈಮ್ ವೀಡಿಯೋ ಇಂದು 2020ರ ತನ್ನ ಮೂರನೇ ಭಾರತೀಯ ಒರಿಜಿನಲ್ ಆದ ಅತ್ಯಂತ ನಿರೀಕ್ಷಿತ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಲ್ ಲೋಕ್‍ನ ಟ್ರೇಲರ್‍ನ ಬಿಡುಗಡೆಯನ್ನು ಘೋಷಿಸಿತು. ಕ್ಲೀನ್ ಸ್ಲೇಟ್ ನಿರ್ಮಾಣದ ಈ ಆತಂಕಕಾರಿ ಅಪರಾಧ ನಾಟಕ, ಅತ್ಯಂತ ಹೈಪ್ರೊಫೈಸ್ ಕೇಸ್ ಒಪ್ಪಿಸಲಾಗಿರುವ ಒಬ್ಬ ನಿತ್ರಾಣ ದೆಹಲಿ ಪೊಲಿಸ್‍ಅಧಿಕಾರಿ ಇನ್ಸ್‍ಪೆಕ್ಟರ್ ಹಾಥಿ ರಾಮ್ ಚೌಧುರಿಯ ಸುತ್ತ ಸುತ್ತುತ್ತದೆ.

ಸುಪ್ರಸಿದ್ಧ ಪತ್ರಕರ್ತನೊಬ್ಬನ ಕೊಲೆಪ್ರಯತ್ನಕ್ಕಾಗಿ ನಾಲ್ವರು ಶಂಕಿತರನ್ನು ಬಂಧಿಸಲಾಗುತ್ತದೆ. ಈ ಕೇಸ್, ಮೇಲ್ನೋಟಕ್ಕೆ ಕಾಣಿಸುವ ಯಾವುದೂ ಸರಿಯಿಲ್ಲದಂತಹ ಕುತಂತ್ರಯುಕ್ತ ಜಟಿಲತೆ ಪಡೆದುಕೊಳ್ಳುತ್ತದೆ. ತತ್ಪರಿಣಾಮವಾಗಿ, ಚೌಧರಿ “ಪಾತಾಳ ಲೋಕದ” ಕರಾಳ ಅಪಾಯಕಾರೀ ವಿಕ್ಷುಬ್ದ ಮಾರ್ಗಗಳಿಗೆ ಕರೆದೊಯ್ಯುತ್ತದೆ. 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಾಗಲಿರುವ ಪಾತಾಲ್ ಲೋಕ್, ಪ್ರೈಮ್ ಸದಸ್ಯರಿಗೆ ಮೇ 15ರಿಂದ ಸ್ಟ್ರೀಮಿಂಗ್‍ಗೆ ಲಭ್ಯವಾಗುತ್ತದೆ.

“ಕೇಂದ್ರಭಾಗದಿಂದ ಬಂದಿರುವ ಹಿಡಿದಿಡುವಂತಹ ಮತ್ತು ನಿಜವಾದ ಕಥೆಗಳನ್ನು ವಿಶ್ವಾದ್ಯಂತ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ.” ಎಂದು ಹೇಳಿದರು ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ಇಂಡಿಯಾ ಒರಿಜಿನಲ್ಸ್‍ನ ಮುಖ್ಯಸ್ಥೆ ಅಪರ್ಣ ಪುರೋಹಿತ್. ಕ್ಲೀನ್ ಸ್ಲೇಟ್ ಫಿಲ್ಮ್‍ಝ್‍ನೊಂದಿಗಿನ ಸಹಯೋಗದೊಂದಿಗೆ ಹೆಪ್ಪುಗಟ್ಟಿಸುವ ನಿರ್ಬಂಧನೀಯ ಕಥೆಯನ್ನು ನಮ್ಮ ಪ್ರೇಕ್ಷಕರಿಗೆ ತರುವುದಕ್ಕೆ ನಮಗೆ ಸಂತೋಷವಾಗುತ್ತಿದೆ.

ಭಾರತ ಹಾಗು ಭಾರತೀಯ ಕಥೆಗಳನ್ನು ಜಾಗತಿಕ ಭೂಪಟದಲ್ಲಿ ಹಾಕುವಂತಹ ಆಕರ್ಷಕ ಸ್ಥಳೀಯ ಕಂಟೆಂಟ್ ಒದಗಿಸುವ ನಮ್ಮ ಗುರಿಯೆಡೆಗೆ ಪಾತಾಲ್ ಲೋಕ್ ಮತ್ತೊಂದು ಹೆಜ್ಜೆಯಾಗಿದೆ. ಪ್ರೈಮ್ ಸದಸ್ಯರು, ಎಂಟೆದೆಬಂಟರ ಬೆನ್ನಟ್ಟುವಿಕೆ, ತೀವ್ರವಾದ ಭಾವನಾತ್ಮಕತೆ, ಮತ್ತು ಅಮೋಘ ಪ್ರದರ್ಶನವನ್ನು ನಿರೀಕ್ಷಿಸಬಹುದು- ನಿಮ್ಮ ಮುಂದಿನ ಕಾಲಕ್ಷೇಪ ವೀಕ್ಷಣೆ ಇಷ್ಟರಲ್ಲೇ ಬರಲಿದೆ!” ಎಂದರು.

“ವಿನೂತನ ಕಂಟೆಂಟ್‍ನೊಂದಿಗೆ ಭಾರತೀಯ ಮನರಂಜನಾ ಕ್ಷೇತ್ರವನ್ನು ತಲ್ಲಣಗೊಳಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ.” ಎಂದು ಹೇಳಿದರು, ಅಮೆಜಾನ್ ಒರಿಜಿನಲ್ ಪಾತಾಲ್ ಲೋಕ್‍ಅನ್ನು ನಿರ್ಮಾಣ ಮಾಡುತ್ತಿರುವ ಕ್ಲೀನ್ ಸ್ಲೇಟ್ ಫಿಲ್ಮ್‍ಝ್‍ನ ನಿರ್ಮಾಪಕ ಕರ್ಣೇಶ್ ಶ್ಶರ್ಮಾ. “ಈ ವರ್ಷ ಕ್ಲೀನ್ ಸ್ಲೇಟ್ ಫಿಲ್ಮ್‍ಝ್ 5 ವರ್ಷಗಳನ್ನು ಪೂರೈಸುತ್ತದೆ.

ಅಮೆಜಾನ್ ಪ್ರೈಮ್ ವೀಡಿಯೋದೊಂದಿಗಿನ ಸಹಯೋಗದೊಂದಿಗೆ ಮುಂಬರುತ್ತಿರುವ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಲ್ ಲೋಕ್‍ನ ಪ್ರದರ್ಶನವನ್ನು ಘೋಷಿಸುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಈ ಶೋ, ಪ್ರೀತಿಯ ಪರಿಶ್ರಮವಾಗಿದ್ದು ನಾವು ಇದನ್ನು ರಚಿಸುವಾಗ ಅನುಭವಿಸಿದಂಥ ಆನಂದವನ್ನೇ ಜಗತ್ತಿನಾದ್ಯಂತದ ವೀಕ್ಷಕರೂ ಅನುಭವಿಸುವರು ಎಂದು ನಿರೀಕ್ಷಿಸುತ್ತಿದ್ದೇವೆ!”

ಪಾತಾಲ್ ಲೋಕ್‍ನ ರಚನಕಾರ ಸುದೀಪ್ ಶರ್ಮಾ, “ಪಾತಾಲ್ ಲೋಕ್ ಪ್ರತಿಯೊಬ್ಬ ರಚನಕಾರನ ಕನಸು. ಹೃದ್ಭಾಗದಲ್ಲಿ ಇದೊಂದು ಭಾರತೀಯ ಕಥೆಯಾಗಿದ್ದರೂ, ಅದ್ಭುತವಾದ ಜಾಗತಿಕ ಅಪೀಲ್ ಹೊಂದಿದೆ. ಇದಕ್ಕೆ ಕಾರಣ, ಅದು ಹೇಳಲಿರುವ ಕಥೆ ಮತ್ತು ಅದರ ಪಾತ್ರಗಳು.

ಕ್ಲೀನ್ ಸ್ಲೇಟ್ ಫಿಲ್ಮ್‍ಝ್‍ನ ಜೊತೆಗೆ, ನಮ್ಮ ಕಾಲದ ಅತ್ಯುತ್ತಮ ರಚನಕಾರರಿಗೆ ತವರೂರಾದ, ಕೆಲವು ಪ್ರಶಸ್ತಿ ವಿಜೇತ ಕಂಟೆಂಟ್‍ಗಳನ್ನು ತಯಾರಿಸುತ್ತಿರುವ ಜಾಗತಿಕ ಸ್ಟ್ರೀಮಿಂಗ್ ಸೇವೆಯಾದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನನ್ನ ಡಿಜಿಟಲ್ ಪಾದಾರ್ಪಣೆ ಮಾಡುತ್ತಿದ್ದೇನೆ. ಪಾತಾಲ್ ಲೋಕ್, ಮೊದಲಿನಿಂದ ಕೊನೆಯವರೆಗೂ ವಿಶ್ವಾದ್ಯಂತದ ವೀಕ್ಷಕರನ್ನು ಅವರ ಆಸನಗಳ ತುದಿಯಲ್ಲಿರಿಸಲು ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ.” ಎಂದರು.

# ಕಥಾ ಹಂದರ:
ಪ್ರಮುಖ ಪತ್ರಕರ್ತನೊಬ್ಬನ ಕೊಲೆಪ್ರಯತ್ನದಲ್ಲಿ ನಾಲ್ವರು ಶಂಕಿತರನ್ನು ಹಿಡಿದಾಗ ಒಬ್ಬ ಪ್ರಾಮಾಣಿಕ ಪೊಲಿಸ್ ಅಧಿಕಾರಿಗೆ ಅವನ ಜೀವಿತಾವಧಿಯ ಕೇಸ್ ಒಂದು ದೊರಕುತ್ತದೆ. ಈ ಕೇಸ್, ಮೇಲ್ನೋಟಕ್ಕೆ ಕಾಣಿಸುವ ಯಾವುದೂ ಸರಿಯಿಲ್ಲದಂತಹ ಕುತಂತ್ರಯುಕ್ತ ಜಟಿಲತೆ ಪಡೆದುಕೊಳ್ಳುತ್ತದೆ. ಅದರ ಅನುಸರಣೆಯಲ್ಲಿ ಅವನು ಪಾತಾಳ ಲೋಕದ ಕರಾಳ ಪ್ರಪಂಚಕ್ಕೆ ಕಾಲಿರಿಸಿ, ಆ ನಾಲ್ವರು ಶಂಕಿತರ ಗತಕಾಲದ ಬಗ್ಗೆ ಬೆಚ್ಚಿಬೀಳಿಸುವ ಶೋಧನೆಗಳನ್ನು ಮಾಡುತ್ತಾನೆ.

ಪಾತಾಲ್ ಲೋಕ್, ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜಾಪುರ್ , ಫೋರ್ ಮೋರ್ ಶಾಟ್ಸ್ ಪ್ಲೀಸ್!(ಸೀಸನ್1 ಮತ್ತು 2), ಇನ್ಸೈಡ್ ಎಡ್ಜ್, ಮತ್ತು ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಇರುವ ಪ್ರೈಮ್ ವೀಡಿಯೋ ಕ್ಯಾಟಲಾಗ್‍ನಲ್ಲಿರುವ ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ.

ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆ್ಯಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು.

ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಪ್ರೈಮ್ ಸದಸ್ಯರು ಪಾತಾಲ್ ಲೋಕ್‍ನ ಎಲ್ಲಾ ಎಪಿಸೋಡ್‍ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‍ಗಳಿಗೆ ಡೌನ್‍ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‍ಲೈನ್‍ನಲ್ಲಿ ವೀಕ್ಷಿಸಬಹುದು. ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!