ಚಿತ್ರ: ಅಮರ ಪ್ರೇಮಿ ಅರುಣ
ನಿರ್ದೇಶಕ: ಪ್ರವೀಣ್ ಕುಮಾರ್ ಜಿ
ತಾರಾ ಬಳಗ: ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ, ಬಲ ರಾಜವಾಡಿ, ಕೃತಿ ಭಟ್, ಮಹೇಶ್ ಬಂಗ್, ಮಂಜಮ್ಮ ಜೋಗತಿ ಇತರರು
ರೇಟಿಂಗ್: 3.5
ಸರಳ ಬದುಕಿನ, ಮಧ್ಯಮ ವರ್ಗದ ಒಳ್ಳೆಯ ಮನಸ್ಸಿನ ಹುಡುಗನ ಅಮರ ಪ್ರೇಮಕಥೆಯೇ ಈ ವಾರ ಬಿಡುಗಡೆ ಆಗಿರುವ ‘ ಅಮರ ಪ್ರೇಮಿ ಅರುಣ ‘ ಸಿನಿಮಾ.
ಸಿನಿಮಾದಲ್ಲಿ ನಿರ್ದೇಶಕರು ನಾಯಕನ ಹಳೆ ಪ್ರೇಮ ಕಥೆಯನ್ನು ತೆರೆಗೆ ತರುವ ಮೂಲಕ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಆಸೆ, ಆಕಾಂಕ್ಷೆಯನ್ನು ತೆರೆಯ ಮೇಲೆ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಇಲ್ಲಿ ನಾಯಕನ ಕಥೆ ನೋಡಿದರೆ ಅಯ್ಯೋ ಅನಿಸುತ್ತದೆ. ಆದರೆ ಇಲ್ಲಿ ಯಾರು ವಿಲನ್ ಇಲ್ಲ. ಯಾರು ಕೆಟ್ಟವರು ಇಲ್ಲ. ಪರಿಸ್ಥಿತಿಯೇ ವಿಲನ್ ಆಗಿ ತೆರೆಯ ಮೇಲೆ ಕಥೆ ಮೂಡಿ ಬಂದಿದೆ.
ಚಿತ್ರದಲ್ಲಿ ಪ್ರೇಮದ ಜೊತೆಗೆ ತ್ಯಾಗ, ವಿಷಾದ ಹೀಗೆ ಭಾವನೆಗಳು ತುಂಬಿ ಹೋಗಿವೆ. ಕೊನೆಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನುವಂತೆ ಚಿತ್ರಕಥೆಯನ್ನು ಬರೆಯಲಾಗಿದೆ. ಕಲಾವಿದರು ತಮ್ಮ ಅಭಿನಯದ ಮೂಲಕ ಕಥೆಯನ್ನು ಪ್ರೇಕ್ಷಕರಿಗೆ ಹತ್ತಿರಗೊಳಿಸುತ್ತಾರೆ.
ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ ಸೊಗಸಾಗಿ ನಟಿಸಿದ್ದಾರೆ. ಇವರ ನಟನೆಯಿಂದಲೇ ಸಿನಿಮಾದ ಕಥೆ ಪ್ರೇಕ್ಷಕರಿಗೆ ಆಪ್ತವಾಗುತ್ತದೆ. ನಿರ್ದೇಶಕರು ಸರಳವಾಗಿ ಕಥೆಯನ್ನು ಹೇಳುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಭಾವುಕ ಪ್ರೇಮಕಥೆಯನ್ನು ಇಷ್ಟಪಡುವವರಿಗೆ ಈ ಸಿನಿಮಾ ಹಿಡಿಸಬಹುದು.

Be the first to comment