ಹೇಮಂತ್ ಕುಮಾರ್ ನಾಯಕನಾಗಿ ಆಕ್ಟ್ ಮಾಡ್ತಿರೋ ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾಗೆ ಗೋಪಿಕಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಗೀತಾ , ಹೊಯ್ಸಳ ಸಿನಿಮಾವನ್ನ ನಿರ್ದೇಶನ ಮಾಡಿದ್ದ ವಿಜಯ್ ಆಕ್ಷನ್ ಕಟ್ ಸಿನಿಮಾದ ಶೇಕಡ 6೦ ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅಚ್ಚುತ್ ಕುಮಾರ್ , ರಮೇಶ್ ಇಂದಿರಾ, ಬಾಲು ನಾಗೇಂದ್ರ, ಅವಿನಾಶ್ ಮಾನ್ಸಿ ಸುಧೀರ್ ಹೀಗೆ ಸಾಕಷ್ಟು ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಆಲ್ಫಾ ಮೆನ್ ಲವ್ ವೈಲೆನ್ಸ್ ಈಗಾಗಲೇ ಫಸ್ಟ್ ಲುಕ್ ನಿಂದಲೇ ಸದ್ದು ಮಾಡಿದೆ. ಆಲ್ಫಾ ಸಿನಿಮಾತಂಡ ಸದ್ಯ ಚಿತ್ರದ ಮೇಕಿಂಗ್ ರಿಲೀಸ್ ಮಾಡಿದೆ. ಮೇಕಿಂಗ್ ನಲ್ಲಿ ಹೆಚ್ಚು ಸ್ಟಂಟ್ಸ್ ಸೀನ್ ಚಿತ್ರೀಕರಣ ಮಾಡಿದ್ದು ಈ ಸ್ಟಂಟ್ಸ್ ಗಳನ್ನ ವಿನೋದ್ ಮಾಸ್ಟರ್ ನಿರ್ದೇಶನ ಮಾಡಿದ್ದಾರೆ.
ಇನ್ನುಳಿದ ಫೈಟ್ ಗಳನ್ನ ಟಾಲಿವುಡ್ ನ ವಿಜಯ್ ಮಾಸ್ಟರ್ ಡೈರೆಕ್ಟ್ ಮಾಡಲಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಿನಿಮಾತಂಡ ಚಿತ್ರೀಕರಣದ ಕೊನೆಯಲ್ಲಿ ಹಾಡಿನ ಶೂಟಿಂಗ್ ಪ್ಲಾನ್ ಮಾಡಿದೆ .ಈ ಸಿನಿಮಾ ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ.
—-





Be the first to comment