ಅಲ್ಲು ಅರ್ಜುನ್ ಗೆ ಸಂಕಷ್ಟ?

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆಕಾಲ್ತುಳಿತದಿಂದ ಮಹಿಳೆ ಸತ್ತ ಪ್ರಕರಣಕ್ಕೆ  ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರು  ಟ್ವಿಸ್ಟ್ ನೀಡಿದ್ದಾರೆ.

ಕಾಲ್ತುಳಿತದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕರನ್ನು ಬಂಧಿಸಿದ್ದಾರೆ.  ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ಪೊಲೀಸರು ಅಲ್ಲು ಅರ್ಜುನ್ ಗೆ ​  ಶಾಕ್ ನೀಡಿದ್ದಾರೆ.

ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಥಿಯೇಟರ್‌ ಗೆ ಪುಷ್ಪ 2 ಚಿತ್ರತಂಡ  ಬರಬಾರದು ಎಂದು ಲಿಖಿತವಾಗಿ ಪತ್ರದ ಮೂಲಕ ಸೂಚಿಸಿದ್ದರು.  ಈ ಕುರಿತು ಪತ್ರ   ಹೊರ ಬಿದ್ದಿದೆ.  ಚಿತ್ರತಂಡಕ್ಕೆ ಥಿಯೇಟರ್‌ಗೆ ಬರಲು ಅನುಮತಿ ನೀಡಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಅಲ್ಲು ಅರ್ಜುನ್ ಅನುಮತಿಯಿಲ್ಲದೆ ಥಿಯೇಟರ್‌ಗೆ ಬಂದಿದ್ದರು. ಸಿನಿಮಾ ನೋಡಿ ಹೊರಡುವಾಗ ಅನುಮತಿ ಪಡೆಯದೇ ರ್ಯಾಲಿ ಮೂಲಕ ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.   ಇದು ಅಲ್ಲು ಅರ್ಜುನ್ ಗೆ   ಸಂಕಷ್ಟ ತಂದೊಡ್ಡಲಿದೆ ಎನ್ನಲಾಗುತ್ತಿದೆ.

ಪುಷ್ಪ 2 ಚಿತ್ರದ ಪ್ರೀಮಿಯರ್​ ಶೋ ವೇಳೆ ಸೆಲೆಬ್ರಿಟಿಗಳು ಬರಲಿದ್ದಾರೆ. ಹೀಗಾಗಿ ಭದ್ರತೆ ಬೇಕು ಎಂದು ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಇದೀಗ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣಕ್ಕೆ  ಟ್ವಿಸ್ಟ್ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!