ಅಲ್ಲು ಅರ್ಜುನ್- ಅಟ್ಲಿ ಕಾಂಬಿನೇಷನ್‌ ನ ಹೊಸ ಚಿತ್ರ ಸನ್ ಪಿಕ್ಚರ್ ನಿರ್ಮಾಣ

“ಪುಷ್ಪ – 2″ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ನಂತರ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಇದೀಗ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ದಕ್ಷಿಣ ಭಾರತದ ಹೆಮ್ಮೆ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಲು ಮುಂದಾಗಿದೆ.

ಸ್ಟಾರ್ ನಟ ,ಸ್ಟಾರ್ ನಿರ್ದೇಶಕ ಹಾಗು ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಜೊತೆಯಾಗಿರುವುದು ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮಹೋನ್ನತ ಚಿತ್ರ ನೀಡಲು ಮೂರು ಮಂದಿ ಸಜ್ಜಾಗಿದ್ದಾರೆ.

ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರ ಘೋಷಿಸಿಲಾಗಿದೆ. ತಾತ್ಕಾಲಿಕವಾಗಿ ಚಿತ್ರಕ್ಕೆ #ಎಎ22 ಎಂದು ಹೆಸರಿಡಲಾಗಿದೆ. ಇದು ಅಲ್ಲು ಅರ್ಜುನ್ ಅವರ 22ನೇ ಚಿತ್ರ. ನಿರ್ದೇಶಕ ಅಟ್ಲಿ ಅವರ 6 ನೇ ನಿರ್ದೇಶನದ ಚಿತ್ರ. ಸನ್ ಪಿಕ್ಚರ್ಸ್ ಸಂಸ್ಥೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೈನ್ಸ್ ಪಿಕ್ಷನ್ ಮತ್ತು ಆಕ್ಷನ್ ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದೆ.

ಹಿಂದೆಂದೂ ನೋಡಿರದ ವೈಜ್ಞಾನಿಕ ಆಕ್ಷನ್ ಚಿತ್ರ ಇದಾಗಿದ್ದು ಭಾರತ ಮತ್ತು ಅಮೇರಿಕಾದ ಪ್ರತಿಷ್ಠಿತ ಸ್ಟುಡಿಯೋ ಗಳಲ್ಲಿ ಚಿತ್ರದ ವಿಎಫ್ ಎಕ್ಸ್ ಕೆಲಸ ನಡೆಯಿತ್ತಿದೆ.

AA22 ಚಿತ್ರದ ಘೋಷಣೆಯನ್ನು ಸನ್ ಪಿಕ್ಚರ್ಸ್ ಅಧಿಕೃತ ವಾಗಿ ಪ್ರಕಟಿಸಿದೆ. ನಿರ್ಮಾಪಕ ಕಲಾನಿಧಿ ಮಾರನ್, ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಜೊತೆಯಾಗಿರುವುದು ಭಾರತೀಯ ಚಿತ್ರರಂಗದಲ್ಲಿ ಕುತೂಹಲ ಹೆಚ್ಚು ಮಾಡಿದೆ.

‘ಸ್ಟೈಲಿಶ್ ಸ್ಟಾರ್’ ಅಲ್ಲು ಅರ್ಜನ್ ಚೆನ್ನೈನಲ್ಲಿರುವ ಸನ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಕಚೇರಿಯಲ್ಲಿ ನಿರ್ದೇಶಕ ಅಟ್ಲೀ ಮತ್ತು ನಿರ್ಮಾಪಕ ಕಲಾನಿದಿ ಮಾರನ್ ಚಿತ್ರದ ಆರಂಭವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ವಿಎಫ್ ಎಕ್ಸ್ ಸ್ಟುಡಿಯೋಗಳಿಗೆ ಭೇಟಿ ನೀಡಿ ಹಾಲಿವುಡ್‌ನ ಹಲವಾರು ಹೆಸರಾಂತ ತಜ್ಞರೊಂದಿಗೆ ಚಿತ್ರದ ಕೆಲಸದ ಬಗ್ಗೆ ಚರ್ಚೆ ನಡೆಸಿದ್ದಾರೆ

ಐರನ್‌ಹೆಡ್ ಸ್ಟುಡಿಯೊದ ಸಿಇಒ ಮತ್ತು ಕಲಾ ನಿರ್ದೇಶಕ ಜೋಸ್ ಫರ್ನಾಂಡೀಸ್ ಅವರು ಸ್ಪೈಡರ್ ಮ್ಯಾನ್: ಹೋಮ್‌ಕಮಿಂಗ್, ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್, ಮತ್ತು ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್‌ ಸೇರಿದಂತೆ ಮತ್ತಿತರ ಚಿತ್ರಗಳ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕರಾದ ಜೇಮ್ಸ್ ಮಡಿಗನ್, ಜಿಐ 2 ಟೆಕ್ ಐರಾನ್ ಮತ್ತು ಹಾಲಿವುಡ್ ನಂತಹ ಟಾಪ್ ಮ್ಯಾನ್ 2 ಟೆಕ್ ಐರಾನ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಇವರೆಲ್ಲಾ ಜೊತೆಯಾಗಿರುವುದು ಚಿತ್ರದ ಬಗ್ಗೆ ಕುತೂಹಲ ಜಾಗತಿಕ‌ ಮಟ್ಟದಲ್ಲಿ ಹೆಚ್ಚುವಂತೆ ಮಾಡಿದೆ.

ನಿರ್ದೇಶಕ ಅಟ್ಲಿ ಪ್ರತಿಕ್ರಿಯಿಸಿ ಚಿತ್ರಕಥೆ ರೋಚಕವಾಗಿದೆ. ಇದಕ್ಕಾಗಿ ವರ್ಷಗಟ್ಟಲೆ ಕೆಲಸ ಮಾಡಲಾಗಿದೆ. ಸನ್ ಪಿಕ್ಚರ್ಸ್‌ನಲ್ಲಿ ಕಲಾನಿದಿ ಮಾರನ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸರ್ ಜೊತೆಯಲ್ಲಿ ಅದ್ಬುವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದು ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!