ಚಿತ್ರ ವಿಮರ್ಶೆ : ಉಳಿದು ಅಳೆದವರು!
ನಿರ್ದೇಶನ :ಅರವಿಂದ್ ಶಾಸ್ತ್ರೀ
ನಿರ್ಮಾಪಕರು : ಅಶು ಬೆಂದ್ರ
ಕಲಾವಿದರು : ಅಶು ಬೆದ್ರ, ಸಂಗೀತ ಭಟ್, ಅತುಲ್ ಕುಲಕರ್ಣಿ, ಶೀಲಂ, ಬಿ.ಸುರೇಶ್, ದಿನೇಶ್ ಮಂಗಳೂರು, ಧರ್ಮಣ್ಣ, ಅಶೋಕ್ ರಾವ್, ಅರವಿಂದ್ ರಾವ್, ಸ್ವಾತಿ ಗುರುದತ್, ಪವನ್ ಕುಮಾರ್, ನಾಗೇಂದ್ರ ಶಾ, ಈ ಟಿವಿ ಶ್ರೀಧರ್, ಹನುಮಂತೇ ಗೌಡ, ಸುಧಾಕರ್, ರವಿ ಭಟ್, ಸ್ಪಂದನ, ವಿಶ್ವನಾಥ್, ಚಾರ್ಲಿ ಮುಂತಾದವರು ನಟಿಸಿದ್ದಾರೆ.
ರೇಟಿಂಗ್ : [4/5]
ಬಿಸಿನಿಮಾಸ್ ಚಿತ್ರ ವಿಮರ್ಶೆ :👇
ಬೆಳ್ಳಿತೆರೆಯಲ್ಲಿ ಡಿಫೆರೆಂಟ್ ದೆವ್ವಗಳನ್ನು ನೋಡಿದ್ದೇವೆ. ಉದಾಹರಣೆಗೆ.. ತನ್ನ ಕರುಳಕುಡಾಗಾಗಿ ಹಂಬಲಿಸುವ ದೆವ್ವ (ಮಮ್ಮೀ ಐ ಲವ್ ಯೂ), ತನ್ನದೇ ಫ್ಲಾಶ್ಬ್ಯಾಕ್ ಹೇಳುವ ದೆವ್ವ (ಯಶೊಗಾಥೆ), ಸೆಯೂರಿಟೀ ಗಾರ್ಡ್ ಆಗಿರೋ ದೆವ್ವ (ನಾನಿ), ಭರತನಾಟ್ಯ ಮಾಡುವ ದೆವ್ವ (ಆಪ್ತಮಿತ್ರ), ಉಮೇಶ್ರೆಡ್ಡಿಯಂತಹ ದೆವ್ವ (ಅತೃಪ್ತ), ಪುಕ್ಕಲ ದೆವ್ವ (ರಿಕ್ತ), ಲವರ್ಬಾಯ್ ದೆವ್ವ (ಜೆಸ್ಸಿ),..… ಹೀಗೆ ವೈರೈಟಿ ವೈರೈಟಿ ದೆವ್ವಗಳನ್ನು ಈಗಾಗಲೇ ನಾವು ನೋಡಿಬಿಟ್ಟೀದ್ದೇವೆ. ಇದನ್ನೆಲ್ಲ ಮೀರಿ.. ನಟ ನಿರ್ದೇಶಕ ಪವನ್ಕುಮಾರ್ ಡಿವೈಡರ್ ದೆವ್ವವನ್ನು ನಮಗೆ ಪರಿಚಿಸಿದರು. ಈಗ ಇಲ್ಲೊಂದು ಚಿತ್ರತಂಡ ಇವೆಲ್ಲವನ್ನೂ ಮೀರಿಸಿ ದೆವ್ವದ ಶೇಡ್ನಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಹೇಳಿದೆ. ಅದೇ ಅರವಿಂದ್ ಶಾಸ್ತ್ರೀ ನಿರ್ದೇಶನದ ‘ಅಳಿದು ಉಳಿದವರು’.
ಈ ಕನ್ನಡಿಗರಿಗೆ ‘ಕಹಿ’ಯ ಮೂಲಕ ಸಿಹಿ ಉಣಬಡಿಸಿದ್ದ ಅರವಿಂದ್ ಅವರ ಮುಂದಿನ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದು, ತಮ್ಮ ಎರಡನೇ ಚಿತ್ರದ ಮೂಲಕವೂ ತಮ್ಮನ್ನು ತಾವು ಪ್ರೂವ್ ಮಾಡಿ ಕೊಂಡಿದ್ದಾರೆ ನ್ಯಾಶನಲ್ ಅವಾರ್ಡ್ ವಿನ್ನರ್ ಡೈರೆಕ್ಟರ್. ಚಿತ್ರದ ಕಥೆಯ ಬಗ್ಗೆ ಹೇಳೋದಾದರೆ, ದೆವ್ವವನ್ನು ಹುಡಿಕಿಕೊಂಡು ಹೋಗುವ ನಾಯಕ ಚಿತ್ರದಕೊನೆಯಲ್ಲಿ ದೆವ್ವವನ್ನು ಕಾಣುತ್ತಾನೆ ಮತ್ತು ಕಾಣುವುದಿಲ್ಲ. ಕನ್ಫ್ಯೂಸ್ ಆಯ್ತಾ? ಈ ಕನ್ಫೂಶನ್ ಹೋಗಬೇಕಾದ್ರೆ ನೀವು ಚಿತ್ರ ನೋಡಬೇಕು. ಬಿಕಾಸ್, ದೃಶ್ಯಗಳು ಹೇಳುವುದನ್ನು ಅಕ್ಷರಗಳು ಹೇಳಲಾರವು ಅಲ್ಲವೇ?
ನಿರ್ಮಾಪಕರಾಗಿದ್ದುಕೊಂಡು, ನಾಯಕನಟನಾಗಿ ಕಾಣಿಸಿಕೊಂಡಿರುವ ಅಶುಬೆದ್ರ ಅವರ ಅಭಿನಯ ಇನ್ನಷ್ಟು ಮೆಚ್ಯೂರ್ಡ್ ಆಗಿರಬೇಕಿತ್ತು ಎಂದು ಅಲ್ಲಲ್ಲಿ ಅನ್ನಿಸದೆ ಇರದು. ಎಂದಿನಂತೆ ಲುಸಿಯಾ ಪವನ್ ಕಾಡುತ್ತಾರೆ. ಸಂಗೀತಾ ಭಟ್ ತೂಕದ ಪಾತ್ರಕ್ಕೆ ತೂಕದ ಅಭಿನಯ ನೀಡಿದ್ದಾರೆ. ಪೋಲಿಸ್ ಅಧಿಕಾರಿಯಾಗಿ ಅತುಲ್ ಕುಲಕರ್ಣಿ ಲೀಲಾಜಾಲವಾಗಿ ನಟಿಸಿದ್ದಾರೆ.
ಚಿತ್ರದ ಪ್ಲಸ್ಪಾಯಿಂಟ್ ಸಿನಿಮಾಟೋಗ್ರಫೀ. ಡಿಓಪಿ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡ್ ಅವರ ಪುತ್ರರಾದ ಅಭಿಶೇಕ್ ನಿಜಕ್ಕೂ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಫ್ರೇಮ್ನಿಂದ ಫ್ರೇಮ್ಗೆ ಬದಲಾಗುವ ಬೆಳಕಿನ ಸಂಯೋಜನೆ ಸುಲಭದ ಮಾತಲ್ಲ ಬಿಡಿ. ಇನ್ನು, ಮಿದುನ್ ಮುಕುಂದನ್ ಹಿನ್ನಲೆ ಸಂಗೀತ ಪರ್ಫೆಕ್ಟ್. ಮಿದುನ್ ಸಾಕಷ್ಟು ಕಡೆ ನಿಶ್ವಬ್ಧ ಕೂಡ ಹಿನ್ನಲೆ ಸಂಗೀತವಾಗಬಲ್ಲುದು ಎಂಬುದನ್ನು ನಿರೂಪಿಸಿದ್ದಾರೆ. ಎಡಿಟರ್ ಸುರೇಶ್ ಅರ್ಮುಂಗಂ ಚಿತ್ರದ ಸೆಕೆಂಡ್ ಆಫ್ನಲ್ಲಿ ಫುಲ್ಮಾರ್ಕ್ ತಗೋತಾರೆ. ಚಿತ್ರದಲ್ಲಿ ನಿರೀಕ್ಷೆಯೇ ಮಾಡದ ಕಂಪ್ಯೂಟರ್ ಗ್ರಾಫಿಕ್ಸ್ ಧಕ್ಕನೆ ಎದುರಾಗಿ ಅಚ್ಚರಿ ಉಂಡುಮಾಡುತ್ತಾ ನೋಡುಗನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಡುತ್ತದೆ.
ಒಟ್ಟಿನಲ್ಲಿ ದೆವ್ವವನ್ನು ನೆಚ್ಚಿಕೊಂಡು ಬೋಲ್ಡ್&ಬ್ರೇವ್ ಎಟೆಂಪ್ಟ್ ಮಾಡಿರೋ ಅಶು ಬೆಂದ್ರ&ಟೀಂ ಒಂದು ಕುತೂಹಲಭರಿತ ಚಿತ್ರ ಕೊಡುವುದರಲ್ಲಿ ಯಶಸ್ವಿಯಾಗಿದೆ. ನಿಮ್ಮ ನಿಮ್ಮೊಳಗಿನ ಅಸಲಿ ದೆವ್ವಗಳ ಪರಿಚಯ ನಿಮ್ಗೆ ಆಗಬೇಕಂದ್ರೆ ಒಂದು ಸಲ ‘ಅಳಿದು ಉಳಿದವರು’ ನೋಡಲೇಬೇಕು.
@ಬಿಸನಿಮಾಸ್ ವಿಮರ್ಶೆ
Pingback: binance registration
Pingback: 툰코