ಆಲಿಯಾ ಭಟ್ ಮಾಜಿ ಪಿಎ ಅರೆಸ್ಟ್!

ಬಾಲಿವುಡ್ ನಟಿ ಆಲಿಯಾ ಭಟ್ ಅವರ  ಮಾಜಿ ಆಪ್ತ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ ಅವರನ್ನು ಬೆಂಗಳೂರಿನಲ್ಲಿ ಜುಹು ಪೊಲೀಸರು ಬಂಧಿಸಿದ್ದಾರೆ.

ಆಲಿಯಾ ಅವರಿಂದ 77 ಲಕ್ಷ ರೂಪಾಯಿಗಳನ್ನು ವೇದಿಕಾ ಅಕ್ರಮವಾಗಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.  ಆಲಿಯಾ ಅವರ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ವೈಯಕ್ತಿಕ ಖಾತೆಗಳಿಂದ ಈ ಮೊತ್ತವನ್ನು ವಂಚಿಸಲಾಗಿದೆ.

ವೇದಿಕಾ ಶೆಟ್ಟಿ 2021 ರಿಂದ 2024 ರವರೆಗೆ  ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ನಟಿಯ ಹಣಕಾಸಿನ ದಾಖಲೆಗಳು, ಪಾವತಿಗಳು ಮತ್ತು ಶೆಡ್ಯೂಲ್ ಗಳನ್ನು ನೋಡಿಕೊಂಡಿದ್ದರು. ಪ್ರಯಾಣ, ಸಭೆಗಳು ಮತ್ತು ಇತರ ಖರ್ಚುಗಳಿಗೆ  ವೇದಿಕಾ ನಕಲಿ ಬಿಲ್‌ಗಳನ್ನು ರಚಿಸಿ ಹಣವನ್ನು ವಂಚಿಸಲು ಆಲಿಯಾ ಭಟ್ ಅವರ ಸಹಿಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಆಲಿಯಾ ಸಹಿ ಮಾಡಿದ ನಂತರ ಆ ಮೊತ್ತವನ್ನು ಆಕೆಯ ಸ್ನೇಹಿತರಿಗೆ ವರ್ಗಾಯಿಸಲಾಗುತ್ತಿತ್ತು. ನಂತರ ಹಣ  ವೇದಿಕಾ ಶೆಟ್ಟಿಯ ಖಾತೆಗೆ ಹಿಂತಿರುಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಲಿಯಾಳ ತಾಯಿ ಆಲಿಯಾ ಅವರ ತಾಯಿ ಮತ್ತು ಕಲಾ ನಿರ್ದೇಶಕಿ ಸೋನಿ ರಜ್ದಾನ್  ದೂರು ನೀಡಿದ ನಂತರ ಪೊಲೀಸರು ಅಪರಾಧವು ಮೇ 2022 ಮತ್ತು ಆಗಸ್ಟ್ 2024 ರ ನಡುವೆ ನಡೆದಿದೆ ಎಂದು ದೃಢಪಡಿಸಿದ್ದಾರೆ.

ಜನವರಿ 23 ರಂದು ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!