‘ಧುರಂಧರ್’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅಕ್ಷಯ್ ಖನ್ನಾ ಅವರು ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ.
ಅಕ್ಷಯ್ ಖನ್ನಾ ವಿಲನ್ ಮತ್ತು ಪೋಷಕ ಪಾತ್ರಗಳಿಗೆ 2.5 ಕೋಟಿ ರೂಪಾಯಿ ರಿಂದ 21 ಕೋಟಿ ರೂಪಾಯಿ ತನಕ ಸಂಭಾವನೆ ಕೇಳುತ್ತಿದ್ದಾರೆ. ಸಂಭಾವನೆ ಹೆಚ್ಚಳ ಕಾರಣದಿಂದ ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ ತಂಡದಿಂದ ಹೊರ ನಡೆದಿದ್ದಾರೆ.
ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ರಲ್ಲಿ ನಟಿಸುವುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಅವರ ಸಂಭಾವನೆ ಹೆಚ್ಚಳ ಮತ್ತು ಪಾತ್ರ ಸಂಬಂಧಿತ ಬೇಡಿಕೆಗಳು ನಿರ್ದೇಶಕರಿಗೆ ಹೊಂದಿಕೆ ಆಗಿಲ್ಲ.ಈ ಕಾರಣದಿಂದ ಅವರು ‘ದೃಶ್ಯಂ 3’ ಚಿತ್ರದಿಂದ ಹೊರ ನಡೆದಿದ್ದಾರೆ.
‘ಧುರಂಧರ್’ ಸಿನಿಮಾದ ಯಶಸ್ಸು ಅಕ್ಷಯ್ ಖನ್ನಾ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದೆ. ಅಕ್ಷಯ್ ಖನ್ನಾ ಅವರ ಸಂಭಾವನೆ ಹೆಚ್ಚಳದ ನಿರ್ಧಾರವು ಸಿನೆಮಾ ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
—-





Be the first to comment