‘ಟಾಕ್ಸಿಕ್’ ಚಿತ್ರದಲ್ಲಿ ಅಕ್ಷಯ್‌ ಒಬೆರಾಯ್

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರದಲ್ಲಿ ನಟ ಅಕ್ಷಯ್‌ ಒಬೆರಾಯ್ ಕಾಣಿಸಿಕೊಳ್ಳಲಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್‌ ಹಂಚಿಕೊಂಡು ಚಿತ್ರತಂಡ ‘ಆತ್ಮೀಯ ಅಕ್ಷಯ್ ಅವರಿಗೆ ಟಾಕ್ಸಿಕ್‌ ಚಿತ್ರತಂಡಕ್ಕೆ ಸ್ವಾಗತ, ಉತ್ತಮ ಚಿತ್ರ ನಿರ್ಮಿಸಲು ನಾವೆಲ್ಲರೂ ಒಟ್ಟಿಗೆ ಶ್ರಮಿಸೋಣ’ ಎಂದು ತಿಳಿಸಿದೆ.

ಒಬೆರಾಯ್ ಅವರು ಪಿಜ್ಜಾ, ‘ಫಿತೂರ್’, ‘ಗುರ್ಗಾಂವ್’, ‘ಕಾಳಕಾಂಡಿ’, ‘ಲವ್ ಹಾಸ್ಟೆಲ್’, ‘ಥಾರ್’, ‘ಗ್ಯಾಸ್ಲೈಟ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ‘ಫೈಟರ್’ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಟಾಕ್ಸಿಕ್‌’ ಸಿನಿಮಾದ ಚಿತ್ರೀಕರಣ ಆರಂಭವಾಗಿರುವ  ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದರು. ಚಿತ್ರದ ನಾಯಕಿ ಯಾರೆಂಬ ಬಗ್ಗೆ ಚಿತ್ರತಂಡ ಇದುವರೆಗೆ ಮಾಹಿತಿ ಹಂಚಿಕೊಂಡಿಲ್ಲ. ಕಿಯಾರಾ ಅಡ್ವಾಣಿ, ನಯನತಾರಾ ಹೆಸರು ಮುನ್ನೆಲೆಗೆ ಬಂದಿವೆಯಾದರೂ ಖಚಿತವಾಗಿಲ್ಲ.

‘ಟಾಕ್ಸಿಕ್‌’  ಚಿತ್ರಕ್ಕೆ ಗೀತು ಮೋಹನ್‌ ದಾಸ್‌ ಆಯಕ್ಷನ್‌ ಕಟ್‌ ಹೇಳಿತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಚಿತ್ರ ಮುಂದಿನ ವರ್ಷದ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ. ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!