ಬಿ.ಜೆ. ವಿಷ್ಣುಕಾಂತ ರಚಿಸಿ ನಿರ್ಮಿಸುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಿತ್ರಕ್ಕೆ ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಭಾಲ್ಕಿ ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ನಡೆದಾಡಿದ ಭೂಮಿಯಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಉತ್ತಮ ಪಾತ್ರಧಾರಿಗಳು, ಮನಮುಟ್ಟುವ ಶರಣರ ಕಥೆಯಿರುವ ಚಿತ್ರ ನೋಡುವುದರಿಂದ ಮನಪರಿವರ್ತನೆಯಾಗುತ್ತದೆ ಎಂದರು.
ಧನ್ನೂರ ಗ್ರಾಮದವರೇ ಆದ ನಟ, ನಿರ್ದೇಶಕ, ನಿರ್ಮಾಪಕ ಬಿ.ಜೆ.ವಿಷ್ಣುಕಾಂತ ಅವರು ಈ ಹಿಂದೆ ಡಾ. ಬಿ.ಆರ್.ಅಂಬೇಡ್ಕರ್, ಕಲ್ಯಾಣ ಕುವರ, ಸೇರಿದಂತೆ ಹಲವಾರು ಚಲನ ಚಿತ್ರಗಳನ್ನು ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಆರ್.ಪಳನಿ ಸಂಗೀತ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರ ತಂಡದ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
—–
Post Views:
101
Be the first to comment