ಗಾಯಕಿ ಅಖಿಲಾ ಪಜಿಮಣ್ಣು ಡಿವೋರ್ಸ್ ಕಾರಣ ಬಹಿರಂಗ ಮಾಡಿದ್ದಾರೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಡಿವೋರ್ಸ್ ವಿಷಯ ಸಾಕಷ್ಟು ಚರ್ಚೆ ಆಯಿತು. ಈವರೆಗೆ ಅವರು ಈ ಬಗ್ಗೆ ಮಾತನಾಡಿರಲಿಲ್ಲ. ಈಗ ಅವರು ಡಿವೋರ್ಸ್ ಕಾರಣ ಬಹಿರಂಗ ಮಾಡಿದ್ದಾರೆ.
‘ಕೊರೊನಾ ಸಮಯದಲ್ಲಿ ನಾನು ಮದುವೆ ಆದೆ. ಆ ಬಳಿಕ ಅಮೆರಿಕಕ್ಕೆ ಹೋದೆ. ನಾನು ಅಲ್ಲಿ ಮ್ಯೂಸಿಕ್ ಕ್ಲಾಸ್ ಮಾಡುತ್ತಿದ್ದೆ. ಅಲ್ಲಿ ಗೆಳೆಯರನ್ನು ಮಾಡಿಕೊಳ್ಳಲು ಆರಂಭಿಸಿದೆ. ನಾವಿಬ್ಬರೂ ಒಂದೂವರೆ ವರ್ಷ ಸಂಬಂಧ ಸರಿದೂಗಿಸಲು ಪ್ರಯತ್ನ ಮಾಡಿದೆವು. ವರ್ಕ್ ಆಗುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಭಾರತಕ್ಕೆ ಮರಳಿದೆ’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
‘ನಾವಿಬ್ಬರೂ ಒಂದೂವರೆ ವರ್ಷ ಸಂಬಂಧ ಸರಿದೂಗಿಸಲು ಪ್ರಯತ್ನ ಮಾಡಿ ಮತ್ತೆೇ ಸಂಬಂಧ ಸರಿದೂಗಿಸಲು ಮೂರು ತಿಂಗಳು ಪ್ರಯತ್ನಿಸಿದೆವು. ಅದು ಸ್ಪಷ್ಟವಾಗಿ ಕೆಲಸ ಮಾಡಲಿಲ್ಲ. ಸಂಬಂಧ ಯಾರ ಮಾನಸಿಕ ಶಾಂತಿಗೂ ತೊಂದರೆಯಾಗಬಾರದು. ನನ್ನ ಮಾನಸಿಕ ಶಾಂತಿ ಬಹಳ ಮುಖ್ಯ. ಅವರ ಮಾನಸಿಕ ಶಾಂತಿ ಮುಖ್ಯ. ನನ್ನ ಕುಟುಂಬದ ಶಾಂತಿಯೂ ಮುಖ್ಯ. ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡೆವು’ ಎಂದಿದ್ದಾರೆ ಅಖಿಲಾ.
‘ನನಗೆ ವಿಚ್ಛೇದನ ವಿಷಯ ಲೀಕ್ ಆಗುವುದು ಇಷ್ಟ ಇರಲಿಲ್ಲ. ಸೆಲೆಬ್ರಿಟಿಗಳ ವಿಚ್ಛೇದನ ವಿಷಯ ಲೀಕ್ ಆಗುತ್ತದೆ ಎಂದು ನನ್ನ ತಂದೆಗೆ ಗೊತ್ತಿತ್ತು. ನನ್ನ ತಂದೆ ನನ್ನನ್ನು ಪ್ರಿಪ್ಯಾರ್ ಮಾಡಿದ್ರು. ನಾವು ಅನುಭವಿಸಿದ ನೋವು ನಮಗೆ ಮಾತ್ರ ತಿಳಿದಿದೆ ‘ ಎಂದಿದ್ದಾರೆ.
—-





Be the first to comment