ನೀವು ನೃತ್ಯದಲ್ಲಿ ಪರಿಣಿತರೇ, ನಿಮಗೆ ಗಾಯನ, ಆ್ಯಂಕರಿಂಗ್ ಇಷ್ಟವೇ? ಸೂಕ್ತ ವೇದಿಕೆ ಸಿಕ್ಕಿಲ್ಲವೇ? ಇಲ್ಲಿದೆ ಅವಕಾಶ!!
ಚಿತ್ರರಂಗದಲ್ಲಿ 3 ದಶಕಗಳ ಅನುಭವ ಹೊಂದಿರುವ ನಿರ್ದೇಶಕ, ನಿರ್ಮಾಪಕ ಸೆಬಾಸ್ಟಿಯನ್ ಡೇವಿಡ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಮರಳಿ ಅದೇ ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಮಹದಾಸೆಯಿಂದ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಸಂಬಂಧಿ ಆ್ಯಕ್ಟಿವಿಟಿಗಳನ್ನೂ ಶುರು ಮಾಡಿದ್ದಾರೆ.
ಇದೀಗ ಹೊಸ ಕಲಾವಿದರಿಗೆ ಅವಕಾಶ ನೀಡುವ ಉದ್ದೇಶದಿಂದ ಆಲ್ಫ್ಲಿಕ್ಸ್ ಮೂಲಕ ಹೊಸ ವೇದಿಕೆಯನ್ನು ಡೇವಿಡ್ ಸೆಬಾಸ್ಟಿಯನ್ ಸಿದ್ಧಪಡಿಸಿದ್ದಾರೆ. ಯುವ ಕಲಾವಿದರಿಗೆ ತಮ್ಮಲ್ಲಿರುವ ಆ್ಯಂಕರಿಂಗ್, ನೃತ್ಯದ ಪ್ರತಿಭೆ, ಗಾಯನದಲ್ಲಿ ಪ್ರಾವಿಣ್ಯತೆ ಹೊಂದಿದವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಆಲ್ಫ್ಲಿಕ್ಸ್ ವೇದಿಕೆ ನೀಡುತ್ತಿದೆ. ಸ್ಟುಡಿಯೋಕ್ಕೆ ಬಂದು ತಮ್ಮ ಪ್ರತಿಭಾ ಪ್ರದರ್ಶನ ನೀಡಿದರೆ, ಅದರ ವಿಡಿಯೋ ತುಣುಕನ್ನು ಆಲ್ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ ಶೇರ್ ಮಾಡಲಾಗುತ್ತದೆ. ಇದರಿಂದ ಎಷ್ಟೋ ಪ್ರತಿಭೆಗಳಿಗೂ ಅನೂಕೂಲವಾಗಲಿದೆ ಎಂಬುದು ಡೇವಿಡ್ ಮಾತು.
-ಸೆಬಾಸ್ಟಿಯನ್ ಡೇವಿಡ್ ಅವರಿಂದ ಹೀಗೊಂದು ಪ್ರಯೋಗ
ಸೆಬಾಸ್ಟಿಯನ್ ಡೇವಿಡ್ ಕನ್ನಡದಲ್ಲಿ ಕೆಲ ವರ್ಷಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದಷ್ಟೇ ಅಲ್ಲ ಆರ್ಟಿ ನಗರ ಮತ್ತು ಗಾಂಧಿನಗರದಲ್ಲಿ ಎರಡೆರಡು ಸ್ಟುಡಿಯೋ ನಡೆಸುತ್ತಿದ್ದರು. ಅದಾದ ಬಳಿಕ ಜಾಹೀರಾತು ನಿರ್ದೇಶನದಲ್ಲಿಯೇ ಹೆಚ್ಚು ಸಕ್ರೀಯರಾಗಿ, ಟಿವಿಯಲ್ಲಿ ನೋಡುವ ಬಹುತೇಕ ಎಲ್ಲ ಚಿನ್ನದ ಜಾಹೀರಾತುಗಳನ್ನು ಸೆಬಾಸ್ಟಿಯನ್ ಅವರೇ ನಿರ್ದೇಶನ ಮಾಡಿದ್ದಾರೆ.
-ಆಲ್ಫ್ಲಿಕ್ಸ್ ಓಟಿಟಿ ಯುವ ಪ್ರತಿಭೆಗಳಿಗೆ ನೀಡುತ್ತಿದೆ ಹೀಗೊಂದು ಸದವಕಾಶ
ಆಲ್ಫ್ಲಿಕ್ಸ್ ಎಂಟರ್ಟೈನ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತೆರೆದಿದ್ದು, ಅದರ ಅಡಿಯಲ್ಲಿ ಓಟಿಟಿ (ಓವರ್ ದಿ ಟಾಪ್) ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕನ್ನಡದಲ್ಲಿ ಸದ್ಯ ಉತ್ಕೃಷ್ಟ ಗುಣಮಟ್ಟದ ಓಟಿಟಿ ವೇದಿಕೆ ಇಲ್ಲದ್ದನ್ನು ಮನಗಂಡು, ಆಲ್ಫ್ಲಿಕ್ಸ್ (AllFlix) ಹೆಸರಿನಲ್ಲಿ ಓಟಿಟಿ ಸಿದ್ಧಪಡಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಈ ಓಟಿಟಿ ಇದೀಗ ಎಲ್ಲ ಹಂತದಿಂದಲೂ ರೆಡಿಯಾಗಿದ್ದು, ಇನ್ನೇನು ಶೀಘ್ರ ಅದರ ಲಾಂಚ್ ಸಹ ಆಗಲಿದೆ. ಏಕಕಾಲದಲ್ಲಿ 50 ಸಾವಿರ ಜನ ಈ ಆ್ಯಪ್ ಬಳಕೆ ಮಾಡಿದರೂ, ಚೂರು ಹ್ಯಾಂಗ್ ಆಗದ ರೀತಿಯಲ್ಲಿ ಅಪ್ಲಿಕೇಷನ್ ಗುಣಮಟ್ಟದ್ದಾಗಿದೆ.
-ನಗರದ ಹೃದಯ ಭಾಗ ಬಸವೇಶ್ವರ ನಗರದ ಶಂಕರ ಮಠದಲ್ಲಿ ಸ್ಟುಡಿಯೋ ಒಮ್ಮೆ ಭೇಟಿ ನೀಡಿ

Be the first to comment