ಬೆಳಗ್ಗೆ ಎದ್ದು ರೆಡಿಯೋ ಆನ್ ಮಾಡಿದ್ದರೆ ನಮಸ್ಕಾರ ಆಕಾಶವಾಣಿ ಮೈಸೂರು ಕೇಂದ್ರ (Akashavani Mysuru Kendra)ಎಂಬ ಮಧುರವಾದ ಮಾತು ಕೇಳಿ ಬರುತ್ತದೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು (Pan India)ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ.
ಜಬರ್ದಸ್ತ್ ಶೋ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿರುವ “ಆಕಾಶವಾಣಿ ಮೈಸೂರು ಕೇಂದ್ರ” (Akashavani Mysuru Kendra)ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. (Song Released)ಕಾರ್ತಿಕ್ ಕೊಡಕಂಡ್ಲ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಮಿಥುನಾ ಎಂಟರ್ ಟೈನ್ ಮೆಂಟ್ ಪ್ರೈ ಲಿ (Mithuna Entertainment Ptv Ltd)ಹಾಗೂ ಸೈನ್ಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ (Science Studios Productions) ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಎಂ.ಎಂ.ಅರ್ಜುನ್ ಈ ಚಿತ್ರದ ನಿರ್ಮಾಪಕರು. ವಿಶ್ವನಾಥ್.ಎಂ, ಹರಿಕುಮಾರ್ ಜಿ, ಕಮಲ್ (Akashavani Mysuru Kendra)ಮೇಡಗೋಣಿ ಈ ಚಿತ್ರದ ಸಹ ನಿರ್ಮಾಪಕರು.
“ಆಕಾಶವಾಣಿ ಮೈಸೂರು ಕೇಂದ್ರ” ಚಿತ್ರ ಲವ್ ಎಂಟರ್ ಟೈನರ್ ಹಾಗೂ ಥ್ರಿಲಿಂಗ್ ಕಥಾಹಂದರ (Akashavani Mysuru Kendra)ಹೊಂದಿರುವ ವಿಭಿನ್ನ ಚಿತ್ರ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಅರ್ಜುನ್ ಅವರ ಸಹಕಾರ ಅಪಾರ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಈಗ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಸತೀಶ್ ಬತ್ತುಲ.
ನಿರ್ದೇಶಕ ಸತೀಶ್ ಕಥೆ ಹೇಳಿದ ತಕ್ಷಣ ಇಷ್ಟವಾಯಿತು. ಅವರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು (Akashavani Mysuru Kendra) ಮಾಡಿದ್ದಾರೆ. ನಿರ್ಮಾಪಕನಾಗಿ ನಾನು, ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಎಲ್ಲಾ ಭಾಷೆಯವರು ನೋಡಬಹುದಾದ ಕಥೆಯುಳ್ಳ(ಯೂನಿವರ್ಸಲ್ ಪಾಯಿಂಟ್ ವುಳ್ಳ) ಚಿತ್ರವಾಗಿರುವುದರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡುತ್ತಿದ್ದೇನೆ. ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ನಮ್ಮ ಚಿತ್ರದಲ್ಲಿ ಅದ್ಭುತವಾಗಿದೆ ಎನ್ನುತ್ತಾರೆ ಎಂ.ಎಂ.ಅರ್ಜುನ್.ಶಿವಕುಮಾರ್, ಹುಮಯ್ ಚಂದ್, ಅಕ್ಷತ ಶ್ರೀಧರ್ ಹಾಗೂ ಅರ್ಚನ ಈ ಚಿತ್ರಡ ನಾಯಕ ಹಾಗೂ ನಾಯಕಿಯರಾಗಿ ನಟಿಸಿದ್ದಾರೆ. ಆರಿಫ್ ಈ ಚಿತ್ರದ ಛಾಯಾಗ್ರಹಕರು.
Be the first to comment