‘ಆಕಾಶ್’ ಮರು ಬಿಡುಗಡೆ

ಪವರ್ ಸ್ಟಾರ್’  ಪುನೀತ್ ರಾಜ್‌ಕುಮಾ‌ರ್ ಅಭಿನಯದ ‘ಆಕಾಶ್’ ಚಿತ್ರ  ಪುನೀತ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 13ರಂದು ಮರು ಬಿಡುಗಡೆಯಾಗುತ್ತಿದೆ.

ಪುನೀತ್‌ ಅವರ 20ನೇ ಹುಟ್ಟುಹಬ್ಬದ ಪ್ರಯುಕ್ತ 2005ರಲ್ಲಿ ಬಿಡುಗಡೆಯಾಗಿದ್ದ ‘ಆಕಾಶ್’ ಚಿತ್ರವ 20 ವರ್ಷಗಳ ಬಳಿಕ ಮತ್ತೆ ರಿ-ರಿಲೀಸ್‌ ಆಗಲಿದೆ.  ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನೀನೆ ನೀನೆ  ನನಗೆಲ್ಲಾ ನೀನೆ… ಮಾತು ನೀನೆ ಮನಸೆಲ್ಲಾ ನೀನೆ’ ಎಂದು ಅಡಿಬರಹ ಬರೆದು ‘ಆಕಾಶ್’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಪುನೀತ್‌ ಪತ್ನಿ ಅಶ್ವಿನಿ ಅವರು,  ಎಕ್ಸ್‌ನಲ್ಲಿ ಚಿತ್ರದ ಬಿಡುಗಡೆ  ಬಗ್ಗೆ ಮಾಹಿತಿ ನೀಡಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿರುವ ‘ಆಕಾಶ್’ ಚಿತ್ರ  ಪುನೀತ್ ರಾಜ್‌ಕುಮಾರ್ ಅವರ ವೃತ್ತಿ ಜೀವನದ ಪ್ರಮುಖ ಚಿತ್ರವಾಗಿದೆ.  ಮಹೇಶ್ ಬಾಬು ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದರು.

ಈ ಚಿತ್ರದಲ್ಲಿ ಆಕಾಶ್‌ ಪಾತ್ರದಲ್ಲಿ ಪುನೀತ್‌ ರಾಜ್‌ ಕುಮಾರ್‌ ನಟಿಸಿದ್ದಾರೆ. ಅವರ ಜೋಡಿಯಾಗಿ ರಮ್ಯಾ ಅವರು ನಂದಿನಿ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳು ಹಾಗೂ ಈ ಜೋಡಿ  ಪ್ರೇಕ್ಷಕರನ್ನು ಮೋಡಿ ಮಾಡಿ ಚಿತ್ರ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು.

2024ರಲ್ಲಿ ಪುನೀತ್‌ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ʼಜಾಕಿ’ ಸಿನಿಮಾ ಮರು ಬಿಡುಗಡೆಯಾಗಿತ್ತು. 2025ರಲ್ಲಿ ‘ಅಪ್ಪು’ ಬಿಡುಗಡೆಯಾಗಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!