ಅಜ್ಞಾತವಾಸಿ

‘ಅಜ್ಞಾತವಾಸಿ’ ಏಪ್ರಿಲ್‌ನಲ್ಲಿ ತೆರೆಗೆ

ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಏಪ್ರಿಲ್ 11 ರಂದು ತೆರೆಗೆ ಬರಲಿದೆ.

ಗುಲ್ಟು ಚಿತ್ರದ ಮೂಲಕ ಫೇಮಸ್ ಆಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತವಾಸಿ’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.  ಟ್ರೈಲರ್ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ  ಪ್ರಮುಖ ಪಾತ್ರಗಳಲ್ಲಿದ್ದಾರೆ.

1997 ರಲ್ಲಿ ಮಲೆನಾಡು ಪ್ರದೇಶದಲ್ಲಿ ನಡೆದ ಘೋರ ಕೊಲೆಯಿಂದ ಸ್ಫೂರ್ತಿ ಪಡೆದಿರುವ ಜನಾರ್ದನ್ ಚಿಕ್ಕಣ್ಣ ಕಥೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಭರತ್ ಎಂಸಿ ಅವರ ಸಂಕಲನ, ಉಲ್ಲಾಸ್ ಹೈದೂರ್ ಅವರ ನಿರ್ಮಾಣ ವಿನ್ಯಾಸವಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ನಿರ್ದೇಶನದ ಜೊತೆಗೆ ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಚಿತ್ರದ ಸಹ-ನಿರ್ಮಾಪಕರಾಗಿರುವ ಹೇಮಂತ್ ಎಂ ರಾವ್,  ‘ಅಜ್ಞಾತವಾಸಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕನಾಗಿದ್ದಾರೆ.  ತಾಯಿಯ ಗೌರವಾರ್ಥವಾಗಿ ಹೇಮಂತ್ ಅವರು ದಾಕ್ಷಾಯಣಿ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!