ಒಬ್ಬರ ಹಾಗೆ ಒಬ್ಬರು ಇರುತ್ತಾರೆ ಎನ್ನುವುದನ್ನು ನಾವೇ ಹಲವಾರು ಬಾರಿ ಕಂಡಿರುತ್ತೇವೆ. ಆ ಎಲ್ಲ ಹೋಲಿಕೆಗಳು ಒಂದು ಹಂತದ ತನಕ ಮಾತ್ರ ಎನ್ನಬಹುದು. ಇನ್ನು ಸಿನಿಮಾ ನಟರಿಗೆ ಡ್ಯೂಪ್ ಆಗಲು ಬಯಸುವವರು ತಮ್ಮಲ್ಲಿ ಆಯಾ ಸ್ಟಾರ್ ಗಳ ಬದಲಾವಣೆಯನ್ನು ಪ್ರಯತ್ನಪೂರ್ವಕವಾಗಿ ತರಲು ಪ್ರಯತ್ನಿಸುತ್ತಾರೆ. ಆದರೆ ತಮ್ಮಲ್ಲಿ ಅಂಥ ಯಾವುದೇ ಆಸಕ್ತಿ ಇರದೆಯೂ ಅದೇ ವೃತ್ತಿ ಕ್ಷೇತ್ರವನ್ನು ಆಯ್ದುಕೊಂಡು ನಾಯಕರಾದವರು ತೇಜಸ್ ಗೌಡ ಎನ್ನುವ ಪೂರ್ಣಚಂದ್ರ ತೇಜಸ್ವಿ. ಅಂದಹಾಗೆ ಇವರು ಯಾರ ಹೋಲಿಕೆ ಎನ್ನುವುದು ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಹೌದು, ಇವರು ಹೋಲುವುದು ತಮಿಳು ನಟ ಅಜಿತ್ ಅವರನ್ನು.
ವರ್ಷಗಳ ಹಿಂದೆ `ಒನ್ ಟೈಮ್’ ಎನ್ನುವ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ತೇಜಸ್ ಗೌಡ ಬಳಿಕ, ತಮಿಳು ನಾಡಲ್ಲಿ ಧಾರಾವಾಹಿಗಳ ಮೂಲಕ ಜನಪ್ರಿಯರಾದರು. ಅಲ್ಲಿಅವರನ್ನು ಜ್ಯೂನಿಯರ್ ಅಜಿತ್ ಎಂದೇ ಗುರುತಿಸುವ ಅಭಿಮಾನಿಗಳಿದ್ದಾರೆ. ಅದೇ ಕಾನ್ಸೆಪ್ಟ್ ನಲ್ಲಿ ಒಂದು ತಮಿಳು ಚಿತ್ರಕ್ಕೂನಾಯಕರಾದರು. ಪ್ರಸ್ತುತ ಕನ್ನಡಕ್ಕೆ ಧಾರಾವಾಹಿಯೊಂದರ ಮೂಲಕ ವಾಪಾಸಾಗಿದ್ದಾರೆ. ವಿಚಿತ್ರ ಏನೆಂದರೆ ಇಲ್ಲಿಯೂ ಅವರಿಗೆ ಒಂದೇ ರೂಪದ ಎರಡು ಪಾತ್ರಗಳಾಗುವ ಅವಕಾಶ ಲಭಿಸಿದೆ. ಆರತಿಗೊಬ್ಬ ಕೀರ್ತಿಗೊಬ್ಬ ಎನ್ನುವ ಧಾರಾವಾಹಿಯ ಮೂಲಕ ಪ್ರಥಮ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರತಿಗೊಬ್ಬ ಕೀರ್ತಿಗೊಬ್ಬ ಎನ್ನುವ ಈ ಧಾರಾವಾಹಿ ಈಗಾಗಲೇ ಜನಪ್ರಿಯವಾಗಿದೆ. ತೇಜಸ್ ಗೌಡ ಎನ್ನುವ ಪೂರ್ಣಚಂದ್ರ ತೇಜಸ್ವಿಗೆ ಇದು ದುಪ್ಪಟ್ಟು ಯಶಸ್ಸು ತಂದುಕೊಡಲಿದೆಯಾ ಎಂದು ನೋಡಬೇಕಿದೆ!
Pingback: continuous integration solutions
Pingback: Hammond Tow