ತಮಿಳು ಸ್ಟಾರ್ ಕೆಜಿಎಫ್ 3ರಲ್ಲಿ ಯಶ್ ಗೆ ಜೊತೆ!

ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಕೆಜಿಎಫ್ 3 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ತಮಿಳಿನ ಖ್ಯಾತ ನಟ ಪರದೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಪ್ರಶಾಂತ್ ನೀಲ್ ಕೆಜಿಎಫ್ 3 ಕೂಡಾ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ಕೆಜಿಎಫ್ 3 ರಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಟ್ ಆಗಿದೆ.

ಮೊದಲು ಅಜಿತ್ ಸೋಲೋ ಹೀರೋ ಆಗಿರುವ ಸಿನಿಮಾಗೆ ಪ್ರಶಾಂತ್ ಆಕ್ಷನ್ ಕಟ್ ಹೇಳಲಿದ್ದಾರಂತೆ. ಅದಾದ ಬಳಿಕ ಕೆಜಿಎಫ್ 3 ರಲ್ಲೂ ಅಜಿತ್ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಇದು ಯಶ್-ಅಜಿತ್ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದೆ.

ಕೆಜಿಎಫ್ 1, ಕೆಜಿಎಫ್ 2 ಭಾರೀ ಹಿಟ್ ಆಗಿತ್ತು.ಇದು ಕೇವಲ ಯಶ್ ಮಾತ್ರವಲ್ಲ, ಕನ್ನಡ ಸಿನಿಮಾ ಮಾರುಕಟ್ಟೆಯನ್ನೇ ಪ್ರಪಂಚದಾದ್ಯಂತ ಹರಡುವ ಹಾಗೆ ಮಾಡಿತ್ತು.  ಪ್ರಶಾಂತ್ ನೀಲ್ ಕೆಜಿಎಫ್ 3 ಸ್ಕ್ರಿಪ್ಟ್ ಕೆಲಸಗಳನ್ನೂ ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ದ್ಯಕ್ಕೆ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಯಶ್ ಕೆಜಿಎಫ್ 3 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!