ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣರುಕ್ಕು , ಕೃಷ್ಣಲೀಲಾ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಕೃಷ್ಣನೆಂದೇ ಬಿಂಬಿಸಿಕೊಂಡಿರುವ ಅಜೇಯರಾವ್ ಈಗ ಕೃಷ್ಣನ ಟಾಕೀಸ್ನಲ್ಲಿ ಮತ್ತೆ ಕೃಷ್ಣವತಾರಿಯಾಗಿ ಮಿಂಚಲು ಹೊರಟಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯಂದು ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಈ ಹಿಂದೆ ಆನಂದಪ್ರಿಯಾ ಎಂಬ ಚಿತ್ರದ ಗುರುತಿಸಿಕೊಂಡಿದ್ದ ವಿಜಯಾನಂದ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಕೃಷ್ಣ ಟಾಕೀಸ್ನಲ್ಲಿ 1995ರಲ್ಲಿ ಲಖೌನ ಚಿತ್ರಮಂದಿರದಲ್ಲಿ ನಡೆದ ನೈಜ ಘಟನೆಗೆ ಸಸ್ಪೆನ್ಸ್, ಥ್ರಿಲ್ಲಿಂಗ್ ಟಚ್ ಕೊಟ್ಟು ಕೃಷ್ಣಟಾಕೀಸ್ಅನ್ನು ಹೊರತರುತ್ತಿದ್ದಾರೆ. ಅಲ್ಲದೆ ಈ ಚಿತ್ರದ ಸಬ್ಟೈಟಲ್ನಲ್ಲಿರುವ ಬಾಲ್ಕನಿ 13 ಎಂಬ ಹೆಸರು ತುಂಬಾ ಕ್ರೇಜ್ ಹುಟ್ಟುಹಾಕಿದೆ.
ಒಂದು ಘಟನೆಯ ಅನ್ವೇಷಣೆಗಾಗಿ ನಾಯಕ ಕೃಷ್ಣ ಅಜೇಯ್ರಾವ್ ಪತ್ರಕರ್ತನ ಗೆಟಪ್ ಹಾಕುತ್ತಾರೆ, ಅವರು ಯಾವ ಸತ್ಯವನ್ನು ಶೋದಿಸಲು ಹೊರಟಿದ್ದರು ಎಂಬುದನ್ನು ತೆರೆಯ ಮೇಲೆ ನೋಡಿಯೇ ತಿಳಿಯಬೇಕು. ಈ ಚಿತ್ರದಲ್ಲಿ ಅಜೇಯ್ರಾವ್ ಗೆ ಜೋಡಿಯಾಗಿ ಅಪೂವರ್ಣ ಮತ್ತು ಸಿಂಧುಲೋಕನಾಥ್ ಕಾಣಿಸಿಕೊಂಡಿದ್ದಾರೆ.
ಸಿಂಧು ಲೋಕನಾಥ್ಗೆ ಪಕ್ಕಾ ಹಳ್ಳಿ ಯ ಮುಗ್ಧ ಹೆಣ್ಣಿನ ಗೆಟಪ್ ಆದರೆ, ಅಪೂರ್ವ ಸಿಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕಿರುತೆರೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಶಾಂಭವಿ ವೆಂಕಟೇಶ್ ಅವರು ಈ ಚಿತ್ರದ ಕೃಷ್ಣ ಟಾಕೀಸ್ ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿಯಾಗಿದ್ದಾರೆ.
ಕೃಷ್ಣ ಟಾಕೀಸ್ನ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದ್ದು ಇನ್ನೊಂದು ಹಾಡು ಹಾಗೂ ಫೈಟಿಂಗ್ ದೃಶ್ಯಗಳು ಬಾಕಿಯಿದ್ದು ಆದಷ್ಟು ಬೇಗ ಅವನ್ನು ಪೂರ್ಣಗೊಳಿಸಿ ಬೆಳ್ಳಿತೆರೆಗೆ ಬರಲು ಚಿತ್ರತಂಡ ಸಜ್ಜಾಗಿದೆ.ಈ ಹಿಂದೆ ಕಾರ್ನಿ ಎಂಬ ಚಿತ್ರ ನಿರ್ಮಿಸಿದ್ದ ಗೋವಿಂದರಾಜು ಅವರು ಬಂಡವಾಳ ಹಾಕಿರುವ ಕೃಷ್ಣ ಟಾಕೀಸ್ನಲ್ಲಿ ಇಂಪಾದ ಹಾಡುಗಳಿದ್ದು ಅದಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತ ನೀಡಿದ್ದರೆ, ಆ್ಯಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಜುವ ಜವಾಬ್ದಾರಿಯನ್ನು ಹೊತ್ತಿರುವವರು ವಿಕ್ರಮ್, ಚಿತ್ರದ ರಂಗನ್ನು ತಮ್ಮ ಕ್ಯಾಮರಾದಿಂದ ಹೆಚ್ಚಿಸುವ ಹೊಣೆಯನ್ನು ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ವಹಿಸಿಕೊಂಡಿದ್ದಾರೆ.
ಮಂಡ್ಯ ರಮೇಶ್, ಶೋಭರಾಜ್ ಬಸು ಕುಮಾರ್ ಮುಂತಾದವರು ನಟಿಸಿದ್ದಾರೆ. ಕೃಷ್ಣನ ಟೈಟಲ್ ಇಟ್ಟುಕೊಂಡು ಅಜೇಯ್ರಾವ್ ನಟಿಸಿರುವ ಬಹುತೇಕ ಚಿತ್ರಗಳು ಸಕ್ಸಸ್ ಕಂಡಿದ್ದು ಕೃಷ್ಣ ಟಾಕೀಸ್ ಕೂಡ ಅದೇ ಸಾಲಿಗೆ ಸೇರುವಂತಾಗಲಿ.
Be the first to comment