ಕೃಷ್ಣ ಲೀಲಾ ಸಿನಿಮಾದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನಟ ಅಜಯ್ ರಾವ್ ಅವರು ಮತ್ತೊಂದು ಸಿನಿಮಾದ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಅಜಯ್ ರಾವ್ ಅವರು ನಿರ್ದೇಶಕ ಪವನ್ ಭಟ್ ಅವರೊಂದಿಗೆ ಕಟಿಂಗ್ ಶಾಪ್ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕ ಪವನ್ ಭಟ್ ಕಥೆ ಕೇಳಿ ಇಂಪ್ರೆಸ್ ಆಗಿರುವ ಅಜಯ್ ರಾವ್, ತಮ್ಮ ಬ್ಯಾನರ್ನ ಶ್ರೀ ಕೃಷ್ಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಚಿತ್ರದಲ್ಲಿ ನಾವೇ ನಾಯಕರಾಗಿ ನಟಿಸುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದ ನಿರ್ದೇಶಕ ಪವನ್, ಕಟಿಂಗ್ ಶಾಪ್ ಮೂಲಕ ತಮ್ಮ ಎರಡನೇ ಚಿತ್ರದ ನಿರ್ದೇಶಕರಾಗುತ್ತಿದ್ದಾರೆ.
ಕೊನೆಯದಾಗಿ ಶೋಕಿವಾಲಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಜಯ್ ರಾವ್, ಒಳ್ಳೆಯ ಸ್ಕ್ರಿಪ್ಟ್ಗಾಗಿ ಕಾಯುತ್ತಿದ್ದರು. ಪವನ್ ಅವರ ಕಥೆ ಕೇಳಿ ಒಪ್ಪಿಕೊಂಡಿದ್ದಾರೆ. ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಮುಂದೆ ಹಂಚಿಕೊಳ್ಳಲಿದೆ.
___

Be the first to comment