Not Out Movie : ಯಶಸ್ಸಿನ ನಿರೀಕ್ಷೆಯಲ್ಲಿ ಅಜಯ್ ಪೃಥ್ವಿ

ನಾಟ್ ಔಟ್ ಚಿತ್ರ ಜುಲೈ 19ರಂದು ತೆರೆಗೆ ಬರಲಿದ್ದು, ಚಿತ್ರದ ನಾಯಕ ನಟ ಅಜಯ್ ಪೃಥ್ವಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ರಾಷ್ಟ್ರಕೂಟ ಪಿಚ್ಚರ್ಸ್ ಲಾಂಛನದಲ್ಲಿ ವಿ ರವಿಕುಮಾರ್ ಹಾಗೂ ಸಂಶುದ್ದೀನ್ ಎ ಅವರು ನಾಟ್ ಔಟ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಂಬರೀಶ್ ನಿರ್ದೇಶಕ ಆಗಿರುವ ಈ ಚಿತ್ರದಲ್ಲಿ ಯುವ ನಟ ಅಜಯ್ ಪ್ರಥ್ವಿ , ಅಂಬುಲೆನ್ಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ.

ನಾನು ಈಗಾಗಲೇ ಪುರುಷೋತ್ತಮನ ಪ್ರಸಂಗ ಚಿತ್ರದಲ್ಲಿ ನಟಿಸಿದ್ದೇನೆ. ಆ ಚಿತ್ರದ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನಾಟ್ ಔಟ್ ಚಿತ್ರದಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ಪಾತ್ರದ ಪೋಷಣೆ ಭಿನ್ನವಾಗಿದೆ ಎಂದು ಅಜಯ್ ಹೇಳಿದ್ದಾರೆ.

ಪೃಥ್ವಿ ಅವರು ಈ ಚಿತ್ರದಲ್ಲಿ ನಾಯಕ ಆಗಿ ನಟಿಸುವ ಮುನ್ನ ವಿದೇಶದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. ಇವರು ಐದನೇ ತರಗತಿಯಿಂದ ಬಿಂಬ ಮೂಲಕ ಕಲಿಕೆ ಆರಂಭಿಸಿದರು. ಬಳಿಕ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆಯನ್ನು ಕಲಿತಿದ್ದಾರೆ.

ನಾಟ್ ಔಟ್ ಚಿತ್ರದ ಟ್ರೈಲರ್ ಹಿಟ್ ಲಿಸ್ಟ್ ಸೇರಿದೆ. ಕಣ್ಣಿಗೆ ಕಾಣದ ವ್ಯಕ್ತಿ ನೀಡುವ ತೀರ್ಪು ನಾಟೌಟ್ ಆಗಿದೆ. ಜೀವನದ ಪ್ರತಿ ಆಟದಲ್ಲಿ ಅಂಪೈರ್ ಇರುತ್ತಾನೆ. ಈ ಚಿತ್ರದಲ್ಲಿ ಹುಲಿ ಹಾಗೂ ಕುರಿ ಎಂಬ ಹಳ್ಳಿ ಸೊಗಡಿನ ಆಟದ ಜೊತೆಗೆ ಚಿತ್ರಕಥೆ ಸಾಗುತ್ತದೆ. ಹುಲಿಗಳಿಂದ ತಪ್ಪಿಸಿಕೊಳ್ಳಲು ಕುರಿಗಳು ಮಾಡುವ ಪ್ರಯತ್ನಗಳು ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ಇದೆ ಎಂದು ಅಜಯ್ ಪೃಥ್ವಿ ಹೇಳುತ್ತಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!