ಕಾಂತಾರ ಖ್ಯಾತಿಯ ಸಂಗೀತ ನಿರ್ದೇಶಕ ಅಜನಿ ಲೋಕನಾಥ್ ಅವರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಮೊದಲ ಬಾರಿಗೆ ಪರಭಾಷಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅಜನೀಶ್ ಲೋಕನಾಥ್ ಮೊದಲ ಬಾರಿಗೆ ಸಾರಿ ಹೆಸರಿನ ಮರಾಠಿ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.
ಕಾಂತಾರ ಸಿನಿಮಾ ಬಳಿಕ ಅಜನೀಶ್ ಬೇಡಿಕೆ ಹೆಚ್ಚಾಗಿದೆ. ಮರಾಠಿಗರು ಇವರ ಸಂಗೀತ ಸಂಯೋಜನೆಯನ್ನು ಕಂಡು ಕರೆಸಿಕೊಂಡಿದ್ದಾರೆ. ಮರಾಠಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾರಿ ಕನ್ನಡದ ರಿಮೇಕ್ ಸಿನಿಮಾ ಆಗಿದೆ. ಕನ್ನಡದಲ್ಲಿ ದಿಯಾ ಸಿನಿಮಾ ದೊಡ್ಡ ಹಿಟ್ ಕೊಟ್ಟಿತ್ತು. 2020ರಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಜನರ ಮನಗೆದ್ದಿತ್ತು. ಈ ಸಿನಿಮಾ ಮರಾಠಿಗೆ ಸಾರಿ ಹೆಸರಿನಲ್ಲಿ ರಿಮೇಕ್ ಆಗಿದೆ. ಮೇ 5 ರಂದು ಈ ಸಿನಿಮಾ ರಿಲೀಸ್ ಆಗಿದೆ.
__
Be the first to comment