ನೆಗೆಟಿವ್ ರೋಲ್​​ನಲ್ಲಿ ಐಶ್ವರ್ಯಾ!

ಬಿಗ್​ಬಾಸ್​​ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಅವರು ಹೊಸ ಕನ್ನಡ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್​​ನಲ್ಲಿ ನಟಿಸುತ್ತಿದ್ದಾರೆ.

ಹೊಸ ಕನ್ನಡ ಧಾರಾವಾಹಿಯ ಪ್ರೋಮೋವನ್ನು ಸ್ಟಾರ್ ಸುವರ್ಣ ವಾಹಿನಿ  ಹಂಚಿಕೊಂಡಿದೆ. ಈ ವಾಹಿನಿಯಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಹೆಸರಿನ ಧಾರಾವಾಹಿ  ಈಗಾಗಲೇ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ  ಅವರು ನಟಿಸುವ ಸಾಧ್ಯತೆ ಇದೆ.

ಪ್ರೋಮೋದಲ್ಲಿ ‘ಹೆಸರು ಮಾತ್ರ ಸಾಕ್ಷಿ. ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ಧುರ್ಯೋದನ ಇಷ್ಟ’ ಎಂದು ಐಶ್ವರ್ಯಾ ಅವರ ಪಾತ್ರ ಪರಿಚಯ ಆಗುತ್ತದೆ. ಇದು ನೆಗೆಟಿವ್ ಶೇಡ್ ಎಂಬುದು ಸ್ಪಷ್ಟವಾಗಿದೆ. ಕಥಾ ನಾಯಕ-ನಾಯಕಿ ಮಧ್ಯೆ ಸಾಕ್ಷಿ ಬರುತ್ತಾಳೆ. ರಾಣಾ ಪಾತ್ರದಲ್ಲಿ ಸುಂದರ್ ಅವರು ನಟಿಸಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ.

ಐಶ್ವರ್ಯಾ ಶಿಂಧೋಗಿ ಅವರು ಬಿಗ್ ಬಾಸ್ ಮನೆ ಮಗಳು ಎಂದು ಕರೆಸಿಕೊಂಡರು. ಬಿಗ್ ಬಾಸ್ ಸ್ಪರ್ಧಿಯಾಗಿ ಅವರು ಗಮನ ಸೆಳೆದರು. ಈ ಧಾರಾವಾಹಿಯಲ್ಲಿ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!