Aishwarya Rajesh: ರಶ್ಮಿಕಾಗಿಂತ ಚೆನ್ನಾಗಿ ನಟಿಸುತ್ತಿದ್ದೆ ಎಂದ ಐಶ್ವರ್ಯ

ಅಲ್ಲು ಅರ್ಜುನ್‌ ನಾಯಕ ನಟನೆಯ ಪುಷ್ಪಾ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ನಾನು ರಶ್ಮಿಕಾಗಿಂತ ಚೆನ್ನಾಗಿ ನಟಿಸುತ್ತಿದ್ದೆ ಎಂದು ನಟಿ ಐಶ್ವರ್ಯ ರಾಜೇಶ್‌ ಹೇಳಿಕೆ ನೀಡಿದ್ದಾರೆ.

“ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಆ ಪಾತ್ರ ಅವರಿಗಿಂತ ನನಗೇ ಹೆಚ್ಚು ಸೂಕ್ತವಾಗುತ್ತಿತ್ತು. ನಾನು ಅವರಿಗಿಂತ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸುತ್ತಿದ್ದೆ” ಎಂದು ಫರ್ಹಾನಾ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಐಶ್ವರ್ಯ ರಾಜೇಶ್‌ ಹೇಳಿದ್ದಾರೆ.

ಐಶ್ವರ್ಯ ಅವರು ಫರ್ಹಾನಾ ಸಿನಿಮಾದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಮಗುವಿನ ತಾಯಿಯಾದ ಅವರು ಕುಟುಂಬದ ಬಡತನ ತಾಳಲಾರದೆ ಕಾಲ್‌ ಸೆಂಟರ್‌ ಒಂದರಲ್ಲಿ ಕೆಲಸ ಮಾಡಲಾರಂಭಿಸಿದಾಗ ಅಲ್ಲಿ ಬರುವ ಕರೆಗಳು ಜೀವನವನ್ನೇ ಬದಲಿಸುವ ಕಥೆ ಈ ಸಿನಿಮಾದ್ದಾಗಿದೆ.

ತಮಿಳಿನ ಕಾಕ ಮುಟ್ಟಾಯ್‌ ಸಿನಿಮಾ ಮೂಲಕ ಖ್ಯಾತಿ ಪಡೆದರು. ಬಳಿಕ ಅವರು ಬಹುಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ತಮಿಳಿನ ಭೂಮಿಕಾ, ಡ್ರೈವರ್‌ ಜಮುನಾ, ದಿ ಗ್ರೇಟ್‌ ಇಂಡಿಯನ್‌ ಕಿಚನ್‌, ಸೊಪ್ಪನ ಸುಂದರಿ, ರನ್‌ ಬೇಬಿ ರನ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿಯಲ್ಲಿ ಫಿಲಂ, ಡ್ಯಾಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!