ಅ.14ಕ್ಕೆ “ಪ್ರೇಮಂ ಪೂಜ್ಯಂ” ಫಸ್ಟ್ ಲುಕ್ ಟ್ರೈಲರ್ ರಿಲೀಸ್

ಲವ್ಲೀ ಸ್ಟಾರ್‌’ ಪ್ರೇಮ್ ನಟನೆಯ 25ನೇ ಸಿನಿಮಾ “ಪ್ರೇಮಂ ಪೂಜ್ಯಂ” ನ ಫಸ್ಟ್ ಲುಕ್ ಒಳಗೊಂಡ ಟ್ರೈಲರ್ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ.

ಒಟ್ಟು 12 ಹಾಡುಗಳು ಇರುವ ಈ ಚಿತ್ರದ ಹಾಡುಗಳು ಒಂದರ ನಂತರ ಒಂದು ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿ ಸಿನಿಮಾಸಕ್ತರ ಗಮನ ಸೆಳೆದಿವೆ. ಪ್ರೇಮ್‌ ಅಭಿನಯದ 25ನೇ ಸಿನಿಮಾ ಎನ್ನುವ ಕಾರಣಕ್ಕೆ ‘ಪ್ರೇಮಂ ಪೂಜ್ಯಂ’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಮ್‌ ಅವರು 9 ಡಿಫರೆಂಟ್‌ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು ಫಸ್ಟ್ ಲುಕ್ ಗೆ ಅಭಿಮಾನಿಗಳು ಕಾದಿದ್ದಾರೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ಡಾ. ಬಿ. ಎಸ್. ರಾಘವೇಂದ್ರ ನೀಡಿದ್ದಾರೆ. ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ, ಐಂದ್ರಿತಾ ರೇ, ಸಾಧು ಕೋಕಿಲ, ಮಾಸ್ಟರ್‌ ಆನಂದ್‌, ಅನು ಪ್ರಭಾಕರ್‌, ಮಾಳವಿಕಾ ಅವಿನಾಶ್‌, ನಾಗಾಭರಣ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿದೆ.

ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!