ಚಿತ್ರ : ಅಜ್ಞಾತವಾಸಿ
ನಿರ್ದೇಶನ: ಜನಾರ್ಧನ ಚಿಕ್ಕಣ್ಣ
ನಿರ್ಮಾಣ: ಹೇಮಂತ್ ಎಂ ರಾವ್
ತಾರಾ ಬಳಗ : ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು
ರೇಟಿಂಗ್ : 3.5/5
ಹಳ್ಳಿಯೊಂದರ ಪೊಲೀಸ್ ಠಾಣೆಯಲ್ಲಿ 25 ವರ್ಷದ ಬಳಿಕ ಕೊಲೆ ಕೇಸ್ ಬಂದಾಗ ಏನಾಗುತ್ತದೆ ಎನ್ನುವುದನ್ನು ಹೇಳುವ ಸಿನಿಮಾ ಅಜ್ಞಾತವಾಸಿ.
ಈ ವಾರ ತೆರೆಗೆ ಬಂದಿರುವ ಅಜ್ಞಾತವಾಸಿ ಸಿನಿಮಾ ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. ಹುಟ್ಟೂರಿನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಅವರಿಗೆ ಚಿತ್ರದಲ್ಲಿ ಹಲವು ಶೇಡ್ ಗಳಿವೆ.
ಸಿದ್ದು ಮೂಲಿಮನಿ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದ್ದು ಅವರು ನಟನೆಯಲ್ಲಿ ಫಸ್ಟ್ ಕ್ಲಾಸ್ ಎನಿಸಿದ್ದಾರೆ. ಪ್ರೇಮಿಯಾಗಿ ನಟಿಸಿರುವ ಪಾವನ ಗೌಡ ಇಷ್ಟ ಆಗುತ್ತಾರೆ. ಶರತ್ ಲೋಹಿತಾಶ್ವ, ಯಮುನಾ ಶ್ರೀನಿಧಿ, ರವಿಶಂಕರ್ ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಜನಾರ್ಧನ ಚಿಕ್ಕಣ್ಣ ಅವರು ಭಿನ್ನವಾಗಿ ಮರ್ಡರ್ ಮಿಸ್ಟರಿ ಕಥೆಯನ್ನು ಹೇಳುವ ಯತ್ನವನ್ನು ಮಾಡಿದ್ದಾರೆ. ಸಿನಿಮಾದ ಕಥೆ 70ರಿಂದ 90ರ ದಶಕದ ನಡುವೆ ಸಾಗುವ ಕಾರಣ ಆ ಸನ್ನಿವೇಶಕ್ಕೆ ಅಗತ್ಯವಾದ ರೆಟ್ರೋ ಕಥೆಯನ್ನು ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಚರಣ್ ರಾಜ್ ಅವರ ಸಂಗೀತ ಸಿನಿಮಾವನ್ನು ಕಾಡುವಂತೆ ಮಾಡುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುವ ಪ್ರಯೋಗದಂತೆ ಈ ಚಿತ್ರ ಇದ್ದು ಕನ್ನಡಿಗರು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬಹುದಾಗಿದೆ.
______

Be the first to comment