ರಂಗಾಯಣ ರಘು ಅಭಿನಯದ ಕನ್ನಡ ಕ್ರೈಮ್ ಥ್ರಿಲ್ಲರ್ ‘ಅಜ್ಞಾತವಾಸಿ’ ಚಿತ್ರ ಒಟಿಟಿಗೆ ಬರುತ್ತಿದೆ.
ಜೀ5 ಒಟಿಟಿಯಲ್ಲಿ ‘ಅಜ್ಞಾತವಾಸಿ’ ಸಿನಿಮಾ ಮೇ 28ರಂದು ಪ್ರಸಾರ ಆರಂಭಿಸಲಿದೆ. ಸಿನಿಮಾ ರಿಲೀಸ್ ಆಗಿ ಏಳು ವಾರಗಳ ಬಳಿಕ ಚಿತ್ರ ಒಟಿಟಿಗೆ ಬರುತ್ತಿದೆ. ‘ಅಜ್ಞಾತವಾಸಿ’ ಸಿನಿಮಾ ಏಪ್ರಿಲ್ 11ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು.
ಕ್ರೈಮ್ ಡ್ರಾಮಾ ಮಿಸ್ಟರಿ ಸಿನಿಮಾದಲ್ಲಿ ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು ನಟಿಸಿದ್ದಾರೆ. ‘ಗುಲ್ಟೂ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಜನಾರ್ಧನ್ ಚಿಕ್ಕಣ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಶಾಖಾಹಾರಿ’ ಸಿನಿಮಾ ಮೂಲಕ ಗಮನ ಸೆಳೆದ ರಂಗಾಯಣ ರಘು, ‘‘ಗುಳ್ಟು’ ಚಿತ್ರ ಕೊಟ್ಟ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಇವರಿಬ್ಬರೂ ಸೇರಿ ‘ಅಜ್ಞಾತವಾಸಿ’ ಸಿನಿಮಾ ಮಾಡಿದ್ದಾರೆ.
‘ಅಜ್ಞಾತವಾಸಿ’ ಸಿನಿಮಾದ ಕಥೆ ಒಂದು ಹಳ್ಳಿಯಲ್ಲಿ ಸಾಗುತ್ತದೆ. ಸಿನಿಮಾದ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಒಮ್ಮೆ ವೇಗ ಪಡೆದುಕೊಂಡ ಬಳಿಕ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸುತ್ತದೆ.
—-

Be the first to comment