Adipurush: 70 ದೇಶಗಳಲ್ಲಿ ‘ಆದಿಪುರುಷ್​’ ಟ್ರೇಲರ್

ಓವಂ ರಾವತ್ ನಿರ್ದೇಶನದ ‘ಆದಿಪುರುಷ್​’ ಚಿತ್ರದ ಟ್ರೇಲರ್​ ಮೇ 9 ರಂದು 70 ದೇಶಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪೌರಾಣಿಕ ಚಿತ್ರ ‘ಆದಿಪುರುಷ್​’ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಉಂಟಾಗಿದೆ.

ಹೊಸ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೈ ಶ್ರೀ ರಾಮ್​ ಬರಹದೊಂದಿಗೆ ಪೋಸ್ಟರ್ ಹಂಚಿಕೊಂಡಿದ್ದು, ರಾಮನಾಗಿ ಪ್ರಭಾಸ್​ ಆಕಾಶದತ್ತ ಬಿಲ್ಲು ಎತ್ತುತ್ತಿರುವ ದೃಶ್ಯ ಇದೆ, ಹೊಸದಾಗಿ ಬಿಡುಗಡೆಯಾಗಿರುವ ಆದಿಪುರುಷ್​ ಪೋಸ್ಟರ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿವೆ.

ಟ್ರೇಲರ್​ ನ್ನು 2ಡಿ ಮತ್ತು 3ಡಿಯಲ್ಲಿ ಥಿಯೇಟರ್​ನಲ್ಲಿ ಬಿಡುಗಡೆ ಮಾಡುವ ಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ.

ಚಿತ್ರವನ್ನು ಟಿ-ಸೀರಿಸ್​ ಬ್ಯಾನರ್​ ನಲ್ಲಿ ಭೂಷಣ್​ ಕುಮಾರ್​ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಮನಾಗಿ ಪ್ರಭಾಸ್​ ಮತ್ತು ಸೀತೆಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರ ನಿರ್ವಹಿಸಿದರೆ, ದೇವದತ್ತ ನಾಗೆ ಹನುಮಂತನ ಪಾತ್ರವನ್ನು ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ನಟಿಸಿದ್ದಾರೆ.

ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್​ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!