ರೈತರ ಬದುಕನ್ನು ಆಧರಿಸಿದ ಆದರ್ಶ ರೈತ ಚಿತ್ರ ಶೀಘ್ರ ತೆರೆಗೆ ಬರಲಿದೆ.
ಇತ್ತೀಚೆಗೆ ಸಿನಿಮಾದ ಟ್ರೈಲರ್ ಹಾಗೂ ಹಾಡನ್ನು ಬಿಡುಗಡೆ ಮಾಡಲಾಯಿತು. ಟ್ರೈಲರನ್ನು ನಟಿ ಪ್ರಿಯಾ ಹಾಸನ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಿನಿಮಾದಲ್ಲಿ ರೈತನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ಮಾಣವನ್ನು ಡಾ. ಅಮರನಾಥ ರೆಡ್ಡಿ ಅವರು ಮಾಡಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ಅವರು, ನನ್ನ ಕುಟುಂಬ ಕೃಷಿಕರ ಕುಟುಂಬ ಆಗಿದೆ. ಚಿಕನ್ ನಿಂದ ವ್ಯವಸಾಯ ಮಾಡಿ ನನಗೆ ಅಭ್ಯಾಸವಿದೆ. ಮೊದಲಿನಿಂದಲೂ ರೈತರ ಕುರಿತು ಸಿನಿಮಾ ಮಾಡುವ ಆಸೆ ಇತ್ತು. ನಿರ್ದೇಶಕ ರಾಜೇಂದ್ರ ಕೊಣಿದೆಲ ಅವರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾದೆ ಎಂದು ಹೇಳಿದ್ದಾರೆ.
ನಿರ್ದೇಶಕ ರಾಜೇಂದ್ರ ಕೊಣಿದೆಲ ಅವರು, ರೈತರು ಹೆಚ್ಚಿನ ಬಡ್ಡಿಗೆ ಸಾಲವನ್ನು ಮಾಡಬಾರದು. ಸರ್ಕಾರ ಬ್ಯಾಂಕಿನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇಂತಹ ಹಲವು ವಿಷಯಗಳನ್ನು ಚಿತ್ರದಲ್ಲಿ ಹೇಳುವ ಯತ್ನ ಮಾಡಲಾಗಿದೆ. ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ನನಗೆ ಇದು ಮೊದಲ ಚಿತ್ರ ಆಗಿದೆ ಎಂದಿದ್ದಾರೆ.
ಚಿತ್ರದಲ್ಲಿ ರೇಖಾ ದಾಸ್, ಸಿದ್ದಾರ್ಥ್, ಮೈಸೂರು ಸುಜಾತ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಮುರಳಿಧರ್ ನಾವಡ ಅವರು ಸಂಗೀತ ನೀಡಿದ್ದಾರೆ. ಸಿದ್ದರಾಜು ಕೊಟ್ರೇಶಿ ಛಾಯಾಗ್ರಹಣ ಮಾಡಿದ್ದಾರೆ. ಸಾಹಸ ನಿರ್ದೇಶನ ಕೌರವ ವೆಂಕಟೇಶ್ ಅವರದ್ದು ಆಗಿದೆ.
ಚಿತ್ರವನ್ನು ಶೀಘ್ರವಾಗಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿಕೊಂಡಿದೆ.
__
Be the first to comment