ಕಿಸ್ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಈಗ ತಮಿಳಿನ ಹ್ಯಾಟ್ರಿಕ್ ಹೀರೋ ಪ್ರದೀಪ್ ರಂಗನಾಥನ್ ಜೊತೆ ನಟಿಸುತ್ತಿದ್ದಾರೆ.
ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದಲ್ಲಿ ಶ್ರೀಲೀಲಾ ಅಲ್ಲದೇ ಯುವನಟಿ ಮೀನಾಕ್ಷಿ ಚೌಧರಿ ಕೂಡಾ ನಾಯಕಿ ಆಗಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ಪ್ರದೀಪ್ ಅವರೇ ರಚಿಸಿ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ ಎನ್ನಲಾಗಿದೆ.
ಶ್ರೀಲೀಲಾ ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ‘ಆಶಿಖಿ 3’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಜೊತೆಗೆ ಇನ್ನೂ ಎರಡು ಹೊಸ ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.
ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರದೀಪ್ ನಟನೆಯ ‘ಎಲ್ಐಕೆ’ (ಲವ್ ಇನ್ಷುರೆನ್ಸ್ ಕಂಪೆನಿ) ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.
‘ಧಮಾಕ’ ಸಿನಿಮಾ ಬಳಿಕ ತೆಲುಗು ಚಿತ್ರರಂಗದ ಟಾಪ್ ನಟಿಯಾದ ಶ್ರೀಲೀಲಾ, ಈಗ ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.





Be the first to comment