Garadi :ಗರಡಿ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿ ಯಶಸ್ ಸೂರ್ಯ

ಕನ್ನಡ ಚಿತ್ರರಂಗದಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ ಇರುವ ಯಶಸ್ ಸೂರ್ಯ ಅವರು ಗರಡಿ ಚಿತ್ರದ ಮೂಲಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ನಾನು ಇದುವರೆಗೆ 23 ಚಿತ್ರಗಳಲ್ಲಿ ನಟಿಸಿದ್ದೇನೆ. 10 ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಆದರೆ ಇಂದಿಗೂ ಜನರು ನನ್ನನ್ನು ಹೊಸ ಹೀರೋ ಎಂದೇ ನೋಡುತ್ತಾರೆ. ಅವರಿಗೆ ನನ್ನ ಹೆಸರು ಗೊತ್ತಿರುವುದಿಲ್ಲ. ಗರಡಿ ಚಿತ್ರ ನನಗೆ ಯಶಸ್ಸು ತಂದುಕೊಡುತ್ತದೆಯೇ ಎಂದು ನೋಡಬೇಕು ಎಂದು ಯಶಸ್ ಹೇಳಿದ್ದಾರೆ.

ಸೋಮವಾರ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಯಶಸ್ ಸೂರ್ಯ ಅವರು ತಮ್ಮ ಮನದ ನೋವನ್ನು ಹೊರಹಾಕಿದ್ದಾರೆ.

ಕಳೆದ 15 ವರ್ಷಗಳಿಂದ ಒಂದು ಗೆಲುವು ನೋಡಿಲ್ಲ. ಈ ಚಿತ್ರವಾದರೂ ಗೆಲುವು ತಂದು ಕೊಡಲಿ ಎಂದು ಆಶೀರ್ವದಿಸಿ ಎಂದು ಅವರು ಕೋರಿದ್ದಾರೆ.

ಯಶಸ್ ಸೂರ್ಯ ಅವರು ಈ ಚಿತ್ರದಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸೂರ್ಯ ಅಥವಾ ಗರಡಿ ಸೂರ್ಯ ಎಂದು ಅವರ ಹೆಸರು ಬದಲಾಗಿದೆ. ದರ್ಶನ್ ಅವರು ಕಟೀಲು ದೇವಸ್ಥಾನದಲ್ಲಿ ಕಿವಿಯಲ್ಲಿ ಮೂರು ಬಾರಿ ಸೂರ್ಯ ಎಂದು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ.

ದರ್ಶನ್ ಅವರು ಈ ಚಿತ್ರದಲ್ಲಿ ಅವಕಾಶ ಕೊಡಿಸಿದ್ದಾರೆ. ನಾನು ಹೀರೋ ಆದರೆ ಚಿತ್ರದಲ್ಲಿ ಅತಿಥಿ ನಟನಾಗಿ ನಟಿಸುತ್ತೇನೆ ಎಂದಿದ್ದರು. ಬಿ ಸಿ ಪಾಟೀಲ್ ಅವರ ಜೊತೆ ಇದ್ದಾಗ ಫೋಟೋ ಕಳಿಸು ಎಂದಿದ್ದರು. ಬಳಿಕ ಬಿ ಸಿ ಪಾಟೀಲ್ ಅವರು ಮನೆಗೆ ಕರೆದರು. ಅವರು ನಟಿಸುವಂತೆ ಕೇಳಿಕೊಂಡಾಗ ನಾನು ನಟಿಸಲು ಒಪ್ಪಿಕೊಂಡೆ. ಯೋಗರಾಜ್ ಭಟ್ ಅವರು ಚಿತ್ರ ನಿರ್ದೇಶಕರು ಎಂದು ಗೊತ್ತಾದಾಗ ಸಂತೋಷವಾಯಿತು. ಇದು ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ ಎಂದು ಸೂರ್ಯ ಹೇಳಿದ್ದಾರೆ.

ಗರಡಿ ಚಿತ್ರವನ್ನು ಬಿ ಸಿ ಪಾಟೀಲ್ ಕೌರವ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮಾಂತೇರೋ, ರವಿಶಂಕರ್, ಧರ್ಮಣ್ಣ ಮುಂತಾದವರು ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!