ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ಸಂಗೀತಾ  ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ  ಇದೆ ಎಂದು ಸಂಗೀತಾ ಆರೋಪಿಸಿ  27 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ಸಂಗೀತಾ ಅವರು ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ  ಫೆಬ್ರವರಿ 27ರಂದು ವಿಚ್ಛೇದನಕ್ಕೆ  ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯದಲ್ಲಿ ಹೊಸದಾಗಿ ರಾಜಕೀಯ ಪಕ್ಷ ಕಟ್ಟಿರುವ   ವಿಜಯ್  ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ನಟಿ ತ್ರಿಶಾ  ಜೊತೆ ತಳುಕು ಹಾಕಿದ್ದರು. ಇದು ವಿವಾದಕ್ಕೆ ಗುರಿಯಾಗಿ ನಂತರ ನಾಗೇಂದ್ರ ಅವರು ಕ್ಷಮೆಯಾಚಿಸಬೇಕಾಯಿತು.

ವಿಜಯ್ ಅವರ  ಪಕ್ಷ ತಮಿಳಿಗ ವೆಟ್ರಿ ಕಳಗಂ ಕುರಿತು ಪ್ರತಿಕ್ರಿಯಿಸುವಾಗ ನಾಗೇಂದ್ರನ್ ಅವರು, ‘ವಿಜಯ್ ತುಂಬಾ ಸರಳ ವ್ಯಕ್ತಿ. ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಕುಟುಂಬ ಜೊತೆ ಉತ್ತಮ ಸಂಬಂಧ ಹೊಂದಬೇಕು.  ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದ ಹೊರಬರಬೇಕು’ ಎಂದು ಹೇಳಿದ್ದರು.

ವಿಜಯ್ ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ವಿಜಯ್ ನಟನೆಯ ಕೊನೇ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಅಡ್ಡಿಯಾಗಿದೆ. ಈಗ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!