Sharan: ‘ಛೂ ಮಂತರ್‌’ ಶೀಘ್ರ ರಿಲೀಸ್

ಶರಣ್ ನಟನೆಯ ‘ಛೂ ಮಂತರ್‌’ ಶೀಘ್ರ ರಿಲೀಸ್ ಆಗಲಿದೆ.

ಚಿತ್ರದ ಟೈಟಲ್‌ ಟ್ರ್ಯಾಕ್‌ ನ್ನು ಹಿರಿಯ ನಟ ರವಿಚಂದ್ರನ್‌ ಬಿಡುಗಡೆಗೊಳಿಸಿದರು. ‘ಅವತಾರ ಪುರುಷ’, ‘ಗುರು ಶಿಷ್ಯರು’ ಸಿನಿಮಾದ ಯಶಸ್ಸಿನ ಬಳಿಕ ತೆರೆ ಮೇಲೆ ಮೋಡಿ ಮಾಡಲು ಶರಣ್‌ ಮತ್ತೊಮ್ಮೆ ಬರುತ್ತಿದ್ದಾರೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ನಟನೆಯ ‘ಛೂ ಮಂತರ್‌’ ಚಿತ್ರಕ್ಕೆ ನವನೀತ್ ನಿರ್ದೇಶನ ಇದೆ.

‘ನಾನು ನಾಯಕನಾಗಲು ರವಿಚಂದ್ರನ್ ಕಾರಣ. ನಾನು ಅವರೊಂದಿಗೆ ‘ಹಠವಾದಿ’ ಚಿತ್ರದಲ್ಲಿ ಅಭಿನಯಿಸಬೇಕಾದರೆ, ‘ನೀನು ಇನ್ನು ನಾಯಕನಾಗಿಲ್ವಾ?’ ಎಂದು ಕೇಳಿದರು. ನಾಯಕನಾಗಬೇಕು ಎಂದು ಯಾವತ್ತೂ ಅಂದುಕೊಂಡಿರದ ನಾನು ಅವರು ಹೇಳಿದ ಎರಡು ವರ್ಷಗಳಲ್ಲೇ ನಾಯಕನಾದೆ’ ಎಂದು ಶರಣ್ ಹೇಳಿದ್ದಾರೆ.

ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ, ಅನೂಪ್‌ ಛಾಯಾಚಿತ್ರಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!