“ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ”ಚಿತ್ರದ ಪ್ರಚಾರ ಆರಂಭ

ಬೆಳ್ಳಿಪರದೆ ಮೇಲೆ ಸಾಕಷ್ಟು ಪ್ರತಿಭೆಗಳು ತಮ್ಮ ಚಿತ್ರದ  ಶೀರ್ಷಿಕೆ ಹಾಗೂ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರೆ. ಆ ಸಾಲಿನಲ್ಲಿ ತೆರೆಮೇಲೆ ಬರಲು ಸಿದ್ಧವಾಗಿರುವ ಚಿತ್ರವೇ   “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಸಮಾನ್ಯವಾಗಿ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಫೋಟೋಗ್ರಾಫರ್ ಎಂಬ ಅದ್ಭುತ ಪ್ರತಿಭೆ ಇದ್ದೇ ಇರುತ್ತಾರೆ. ಊಹಿಸಿ ನಮ್ಮ ನಿಮ್ಮೆಲ್ಲರ ಬಾಲ್ಯ ಫೋಟೋ ಸ್ಟುಡಿಯೋ, ಫೋಟೋಗ್ರಾಫರ್ ಇಲ್ಲದೇ ಇರಲು ಸಾಧ್ಯವಿರುತ್ತಿತ್ತಾ?

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಾಲಿನಲ್ಲಿ  “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ” ಚಿತ್ರ ನಿಲ್ಲುತ್ತದೆ ನಂಬಿಕೆ ಚಿತ್ರತಂಡದ್ದು,  ಇಲ್ಲಿವರೆಗೂ ನೋಡಿರದ ಒಬ್ಬ ಫೋಟೋಗ್ರಾಫರ್ ಬಗ್ಗೆ ಸಂಬಂಧಿಸಿದ ಚಲನಚಿತ್ರವಾಗಿ ಬರಲಿದೆ. ಈಗ ಪೋಸ್ಟರ್ ಗಳ ಮೂಲಕ ಚಿತ್ರದ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ, ಅತೀ ಶೀಘ್ರದಲ್ಲಿ ಟ್ರೈಲರ್ ಹೊತ್ತು ಬರಲಿದ್ದು, ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!