ಹೊಸ ಲುಕ್ ನಲ್ಲಿ ಮಹೇಶ್ ಬಾಬು

ನಟ ಮಹೇಶ್​ ಬಾಬು ನಟನೆಯ ಹೊಸ ಚಿತ್ರದ ಲುಕ್ ಹೊರ ಬಂದಿದ್ದು, ಮಹೇಶ್​ ಬಾಬು ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಹೇಶ್​ ಬಾಬು ಸರ್ಕಾರು ವಾರಿ ಪಾಟ ಸಿನಿಮಾದ ಬಳಿಕ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ನಟಿಸುತ್ತಿದ್ದು ಶೂಟಿಂಗ್ ಸೆಟ್ ನಿಂದ ಫೋಟೋವೊಂದು ಹರಿಬಿಡಲಾಗಿದೆ. ಈ ಫೋಟೋ ಸಖತ್ ವೈರಲ್ ಆಗಿದ್ದು ಮಹೇಶ್ ಬಾಬು ಹೊಸ ಲುಕ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮಹೇಶ್​ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ವರ್ಕ್ ಮೂಡ್ ಆನ್, ಟೂ ಕೂಲ್ ಎಂದು ಬರೆದುಕೊಂಡಿದ್ದಾರೆ.

ಇದು ಮಹೇಶ್​ ಬಾಬು ನಟಿಸುತ್ತಿರುವ 28ನೇ ಸಿನಿಮಾ. ಇದಕ್ಕೆ ಇನ್ನೂ ಶೀರ್ಷಿಕೆ ಫೈನಲ್​ ಆಗಿಲ್ಲ. ಸದ್ಯಕ್ಕೆ SSMB28 ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆ ಮಹೇಶ್​ ಬಾಬು ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ. 12 ವರ್ಷಗಳ ಬಳಿಕ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡುತ್ತಿದ್ದು ನಿರೀಕ್ಷೆ ಹುಟ್ಟಿಸಿದೆ.

SSMB28 ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡದಿಂದ ಇನ್ನಷ್ಟು ಮಾಹಿತಿ ಹೊರ ಬೀಳಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!