ಮಾನನಷ್ಟ ಮೊಕದ್ದಮೆ ಹೂಡುವೆ: ಕೋಮಲ್

ನನ್ನ ಹೆಸರನ್ನು ಬಳಸಿಕೊಂಡು ಮಸಿ ಬಳೆಯಲು ಯತ್ನ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್​ ವಿತರಿಸುವ ಟೆಂಡರ್ ನ್ನು ಕೋಮಲ್ ಪಡೆದಿದ್ದು ಕಳೆದ ವರ್ಷ ಶಾಲೆ ತೆರೆಯದೇ ಇದ್ದರೂ ಕೋಮಲ್ ಅವರು ಸ್ವೇಟರ್​ ವಿತರಣೆ ಮಾಡಿದ್ದೇವೆ ಎಂದು ಹೇಳಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿ ನಿನ್ನೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಕೋಮಲ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

” ನನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ವಿಚಾರಣೆ ನಡೆಯಲಿ. ನಾನು ತಪ್ಪಿತಸ್ಥ ಎಂದು ಸಾಭೀತಾದರೆ ಬೇಕಾದ್ದನ್ನು ಮಾಡಲಿ. ಸುಮ್ಮನೆ ನನ್ನ ಹೆಸರು ಬಳಸಿದರೆ ಅಂತವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ” ಎಂದು ಗುಡುಗಿದ್ದಾರೆ.

“ನಾನು ಟೆಂಡರ್ ತೆಗೆದುಕೊಂಡೇ ಇಲ್ಲ. ನಾನು ಸ್ವೆಟರ್ ವ್ಯವಹಾರ ಮಾಡಿಲ್ಲ. ಸೆಲೆಬ್ರಿಟಿ ಹೆಸರು ಹೇಳಿಕೊಂಡು ಪ್ರಚಾರ ಆಗುತ್ತದೆ ಎಂದು ನನ್ನ ಹೆಸರನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ವತಿಯಿಂದ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ನಿನ್ನೆ ಸ್ವೇಟರ್ ಹರಾಜು ಹಾಕುವ ಮೂಲಕ ಕೋಮಲ್ ವಿರುದ್ಧ ಪ್ರತಿಭಟನೆ ನಡೆಯಿತು. ಆಯುಕ್ತರ ಕಚೇರಿ ಮುಂಭಾಗ ಸ್ವೆಟರ್ ಗಳನ್ನು ಸುರಿದು ಹರಾಜು ಮಾಡಿ ಪ್ರತಿಭಟನೆ ನಡೆಸಲಾಗಿತ್ತು.
____________

Be the first to comment

Leave a Reply

Your email address will not be published. Required fields are marked *

Translate »
error: Content is protected !!