‘ಆಕ್ಟ್ 1978’ ಹಿಂದಿಯಲ್ಲಿ ರೀಮೇಕ್

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ತಮ್ಮ ಚಿತ್ರ ‘ಆಕ್ಟ್ 1978’  ನ್ನು ಹಿಂದಿ ರೀಮೇಕ್ ಮಾಡುವ ಕುರಿತು ಮಾತುಕತೆ ನಡೆಸಿದ್ದಾರೆ.

 ರೀಮೇಕ್‌ನ ಹಕ್ಕುಗಳನ್ನು ನಿರ್ಮಾಪಕ ನೀರಜ್ ತಿವಾರಿ ಖರೀದಿಸಿದ್ದಾರೆ. ಆಕ್ಟ್ 1978 ರ ಹಿಂದಿ ರೀಮೇಕ್ ಈ ವರ್ಷ ಸೆಟ್ಟೇರಲಿದೆ.

”ಪ್ರತಿಭಾವಂತ ನಟರಿಗಾಗಿ ನಾವು ಹುಡುಕಾಟದಲ್ಲಿದ್ದೇವೆ. ‘ಆಕ್ಟ್ 1978’  ಪ್ರಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ” ಎಂದು ನಿರ್ಮಾಪಕ ತಿವಾರಿ ಹೇಳಿದ್ದಾರೆ.

ಆಕ್ಟ್ 1978 ಚಿತ್ರ 2020ರಲ್ಲಿ ಬಿಡುಗಡೆಯಾಯಿತು. ಇದು ಅಧಿಕಾರಶಾಹಿ ವರ್ಗದ ಅನ್ಯಾಯಗಳನ್ನು ಮೆಟ್ಟಿ ನಿಂತು ಧೈರ್ಯದಿಂದ ಹೋರಾಡುವ ಗರ್ಭಿಣಿಯ ಕಥೆಯನ್ನು ವಿವರಿಸುತ್ತದೆ. ಚಿತ್ರ  ಅದರ ನಿರೂಪಣೆ ಮತ್ತು ಉತ್ತಮ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ಯಜ್ಞ ಶೆಟ್ಟಿ, ಸಂಚಾರಿ ವಿಜಯ್, ಶ್ರುತಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ದತ್ತಣ್ಣ ನಟಿಸಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!