ಕಿರುತೆರೆಯಲ್ಲಿ ‘ಆಚಾರ್ & ಕೋ’ ಸಿನಿಮಾ ಪ್ರಸಾರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಪಿಆರ್‌​ಕೆ ಪ್ರೊಡಕ್ಷನ್ಸ್​’ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡಿರುವ ‘ಆಚಾರ್ & ಕೋ’ ಸಿನಿಮಾ ಇದೇ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ನಲ್ಲಿ ಪ್ರಸಾರಗೊಳ್ಳಲಿದೆ.

ಇದು ರೆಟ್ರೋ ಕಾಲದ ಸಿನಿಮಾವಾಗಿದ್ದು, 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಅವಿಭಕ್ತ ಕುಟುಂಬದಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ, ಮನೆಯ ಜವಾಬ್ದಾರಿ ಹೊತ್ತುಕೊಂಡಿರುವ ತಂದೆ  ನಿಧನರಾದಾಗ ಮನೆಯ ಪರಿಸ್ಥಿತಿ ಹೇಗೆ ಬದಲಾಗುತ್ತದೆ? ಕುಟುಂಬದಲ್ಲಿ ಏನೆಲ್ಲ ವ್ಯತ್ಯಾಸವಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ ಆಗಿದೆ.

ಈ ಸಿನಿಮಾದಲ್ಲಿ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್‌, ವಸ್ತ್ರ ವಿನ್ಯಾಸಕರುಗಳಾಗಿ ಮಹಿಳೆಯರೇ ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಹಾಗೂ ಸುಧಾ ಬೆಳವಾಡಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ‘ಆಚಾರ್ & ಕೋ’ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ ಆದಾಗ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು. ಇದರ ಜೊತೆಗೆ ಅಮೆಜಾನ್ ಪ್ರೈಮ್‌ನಲ್ಲೂ ಇದು ಸದ್ದು ಮಾಡಿತ್ತು.

ಹಾಸ್ಯಮಯವಾಗಿರುವ ಸನ್ನಿವೇಶಗಳನ್ನು ಒಳಗೊಂಡಿರುವ ‘ಆಚಾರ್ & ಕೋ’ ಸಿನಿಮಾದಲ್ಲಿರುವ ಎಮೋಶನಲ್ ದೃಶ್ಯಗಳು ಸಿನಿಮಾ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ.  ಕಿರುತೆರೆ ವೀಕ್ಷಕರಿಗೆ ಈ ಸಿನಿಮಾ ನೋಡುವ ಅವಕಾಶ ಭಾನುವಾರ ಸಿಕ್ಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!