ನಿರ್ದೇಶಕನಿಗೆ ಬೋ*ಮಗ ಎಂದ ಕಿಟ್ಟಿ!

ನಟ ಶ್ರೀನಗರ ಕಿಟ್ಟಿ ವೇದಿಕೆ ಮೇಲೆ ನಿರ್ದೇಶಕನಿಗೆ ‘ಬೋ*ಮಗ’ ಎಂದಿರುವ ವಿಡಿಯೋ ವೈರಲ್‌ ಆಗಿದೆ.

ಜುಲೈ 8ರಂದು ಶ್ರೀನಗರ ಕಿಟ್ಟಿ ಹುಟ್ಟುಹಬ್ಬವನ್ನು ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅವರ ಬರ್ತಡೇ ವಿಶೇಷವಾಗಿ ‘ವೇಷಗಳು’ ಎಂಬ ಚಿತ್ರದ ಫಸ್ಟ್‌ ಝಲಕ್‌ ರಿಲೀಸ್‌ ಮಾಡಲಾಗಿದೆ.  ಸಿನಿಮಾವನ್ನು ‘ಗ್ರೀನ್ ಟ್ರೀ ಸ್ಟುಡಿಯೋಸ್’ ಮೂಲಕ ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಕಿಶನ್‌  ನಿರ್ಮಾಣ ಮಾಡುತ್ತಿದ್ದಾರೆ. ತನ್ನ ಜೊತೆ ಕೆಲಸ ಮಾಡಿದ ಕಿಶನ್‌ ಗೆ ಶ್ರೀನಗರ ಕಿಟ್ಟಿ ರಫ್‌ ಆಗಿ ಮಾತನಾಡಿದ್ದು ಟೀಕೆಗೆ ಕಾರಣವಾಗಿದೆ.

ಶ್ರೀನಗರ ಕಿಟ್ಟಿ ಟೀಸರ್‌ ಬಿಡುಗಡೆ ವೇದಿಕೆಯಲ್ಲಿ ಕಿಶನ್‌ ಅವರನ್ನು ಏಕವಚನದಲ್ಲಿಯೇ ಪರಿಚಯ ಮಾಡಿಕೊಡುತ್ತಾ,  ಬೋ*ಮಗ ಎಂದಿದ್ದಾರೆ. ಆ ವಿಡಿಯೋ ನೋಡಿ ನೆಟ್ಟಿಗರು ಕಿಟ್ಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

‘ಎಷ್ಟಾದ್ರೂ ರವಿ ಬೆಳಗೆರೆ ಅಳಿಯ ಅಲ್ವಾ?’ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ‘ಕಿಶನ್‌ ತನಗೆ ಆತ್ಮೀಯರಾದ್ರೂ ರವಿ ಬೆಳಗೆರೆ  ರೀತಿ ಮಾತನಾಡಿದ್ದು ಸರಿಯಲ್ಲ’ ಎಂದು ನೆಟ್ಟಿಗರು ಶ್ರೀನಗರ ಕಿಟ್ಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!