ಅಭಿಷೇಕ್ ಅಂಬರೀಷ್ ನಟನೆಯ ಹೊಸ ಚಿತ್ರದ ಟೈಟಲ್ ಆಗಸ್ಟ್ 27 ರಂದು ಪ್ರಕಟ ಆಗುವ ಸಾಧ್ಯತೆ ಇದೆ.
ಅಂದು ಸುಮಲತಾ ಅಂಬರೀಶ್ ಅವರ ಜನ್ಮದಿನವಿದ್ದು ಅಂದೇ ಸಿನಿಮಾದ ಪೋಸ್ಟರ್ ಮೂಲಕ ಹೊರಬರುವ ನಿರೀಕ್ಷೆಯಿದೆ. ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಪ್ರಾಜೆಕ್ಟ್ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ಬಾಲಿವುಡ್ ಮತ್ತು ಇತರ ದಕ್ಷಿಣ ಭಾರತದ ಸಿನಿಮಾಗಳನ್ನು ನಿರ್ಮಿಸಿರುವ ಪ್ರಸಿದ್ದ ಸಂಸ್ಥೆಯೊಂದು ಅಭಿಷೇಕ್ ಅವರ ಮುಂದಿನ ಸಿನಿಮಾ ಪ್ರೊಡ್ಯೂಸ್ ಮಾಡಲಿದೆ ಎಂದು ಹೇಳಲಾಗಿದೆ.
ಅಭಿಷೇಕ್ ಗೆ ಇದೊಂದು ವಿಶಿಷ್ಟ ಪ್ರಾಜೆಕ್ಟ್ ಆಗಿದೆ. ಇದು ಅಭಿಷೇಕ್ ಗೆ ನಾಲ್ಕನೇ ಸಿನಿಮಾ. ಮಹೇಶ್ ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದೆ. ಶನಿವಾರ ಬಿಡುಗಡೆಯಾಗುವ ಮೋಷನ್ ಪೋಸ್ಟರ್ ನಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.
ಅಭಿಷೇಕ್ ಅಂಬರೀಷ್ ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ ನಿರ್ದೇಶನದ ಕಾಳಿ ಸಿನಿಮಾ ಕೂಡಾ ಮುಂದಿನ ತಿಂಗಳು ಸೆಟ್ಟೇರಲಿದೆ.
____

Be the first to comment