ಜೂನ್ 5ರಂದು ಅಭಿಷೇಕ್ ಅಂಬರೀಷ್ ಅವರು ಅವಿವ ಬಿದ್ದಪ್ಪ ಜೊತೆ ಸಪ್ತಪದಿ ತುಳಿಯಲಿದ್ದು, ಮದುವೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಜರುಗಲಿದೆ. ಈಗಾಗಲೇ ಸಿನಿಮಾ ರಂಗದ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ.
ಕಳೆದ ತಿಂಗಳು ಅಭಿಷೇಕ್ ಹಾಗೂ ತಾಯಿ ಸುಮಲತಾ ಅಂಬರೀಷ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದರು. ಅಭಿಷೇಕ್ ಮತ್ತು ಅವಿವಾ ವಿವಾಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ.
ಹಿರಿಯ ನಟ ಅಂಬರೀಷ್ ಹಾಗೂ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಕೆಲ ತಿಂಗಳ ಹಿಂದೆ ನಡೆದಿತ್ತು. ಇವರಿಬ್ಬರ ವಿವಾಹಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
___

Be the first to comment