ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರದಾಳಿ ಬೆನ್ನಲ್ಲೇ ಪಾಕಿಸ್ತಾನದ ನಟ ಫಾವದ್ ಖಾನ್ ಗೆ ಯೂಟ್ಯೂಬ್ ಇಂಡಿಯಾ ಶಾಕ್ ಕೊಟ್ಟಿದೆ.
ಪಾಕಿಸ್ತಾನದ ನಟ ಫಾವದ್ ಖಾನ್ ನ ‘ಅಭಿರ್ ಗುಲಾಲ್’ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈಗ ಅಭಿರ್ ಗುಲಾಲ್ ಸಿನಿಮಾದ ಹಾಡುಗಳನ್ನು ಯೂಟ್ಯೂಬ್ ನಿಂದ ಅಳಿಸಿ ಹಾಕಲಾಗಿದೆ.
ಆರತಿ ಎಸ್ ಬಾಗ್ಡಿ , ‘ಅಭಿರ್ ಗುಲಾಲ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಫಹಾದ್ ಖಾನ್, ನಾಯಕಿಯಾಗಿ ವಾಣಿ ಕಪೂರ್ ಅಭಿನಯಿಸಿದ್ದಾರೆ. ಮೇ 9ಕ್ಕೆ ಈ ತೆರೆಗೆ ಬರಲಿದೆ. ಫಹಾದ್ ಖಾನ್ ಹೊರತುಪಡಿಸಿ ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರೂ ಭಾರತೀಯರೇ ಆಗಿದ್ದಾರೆ. ಪಾಕಿಸ್ತಾನದ ನಟನಿದ್ದಾನೆ ಎಂಬ ಕಾರಣಕ್ಕೆ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿ ಬಂದಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನಿರಾಕರಿಸಿದೆ ಎನ್ನಲಾಗುತ್ತಿದೆ.
ಪಹಲ್ಗಾಮ್ ನಡೆದ ಪೈಶಾಚಿಕ ಕೃತ್ಯವನ್ನು ಫಾವದ್ ಖಾನ್ ಖಂಡಿಸಿದ್ದ. ಈ ಘಟನೆಯಿಂದ ತೀವ್ರ ನೋವಾಗಿದೆ. ದಾಳಿಯಿಂದ ಅಮಾಯಕರು ಮೃತಪಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ.

Be the first to comment