ನ.7ಕ್ಕೆ ಅಬ್ಬರ ಸಿನಿಮಾ ಟ್ರೈಲರ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾದ ಟ್ರೈಲರ್ ನ.7ರಂದು ಬಿಡುಗಡೆ ಆಗಲಿದೆ.

ಅಬ್ಬರ ಸಿನಿಮಾ ಹಾಡುಗಳ ಮೂಲಕ ಭರ್ಜರಿ ಸೌಂಡ್ ಮಾಡಿದೆ. ಚಿತ್ರ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಕೆ ರಾಮ್ ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿ& ಎಮ್ ಮೂವೀಸ್ ಬ್ಯಾನರ್ ನಡಿ ಬಸವರಾಜ್ ಮಂಚಯ್ಯ ಬಂಡವಾಳ ಹೂಡಿದ್ದಾರೆ.

ಪ್ರಜ್ವಲ್ ದೇವರಾಜ್ ಸೇರಿದಂತೆ ರಾಜ್ ಶ್ರೀ ಪೊನ್ನಪ್ಪ, ರವಿಶಂಕರ್, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!