ಫೆಬ್ರವರಿ 16ಕ್ಕೆ “ಅಬ್ಬಬ್ಬ” ತೆರೆಗೆ

 ಕೆ.ಎಂ.ಚೈತನ್ಯ ನಿರ್ದೇಶನದ “ಅಬ್ಬಬ್ಬ” ಚಿತ್ರ ಫೆಬ್ರವರಿ 16ಕ್ಕೆ ತೆರೆ ಕಾಣಲು ಸಜ್ಜಾಗಿದೆ.

ಮಿರಾಮಾರ್ ಫಿಲ್ಮ್ಸ್ ಮತ್ತು ಫ್ರೈಡೇ ಫಿಲಂ ಹೌಸ್ ಸಹಯೋಗದಲ್ಲಿ ನಿರ್ಮಾಣಗೊಂಡ “ಅಬ್ಬಬ್ಬ” ಚಿತ್ರದ ಟ್ರೇಲರ್ ನ್ನು ನಟ ಡಾಲಿ ಧನಂಜಯ್  ಲೂಲೂ ಮಾಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

“ನಾನು ಸಾಮಾನ್ಯವಾಗಿ ಒಂದೇ ಜಾನರ್’ನ ಸಿನಿಮಾ ಮಾಡುವುದಿಲ್ಲ. ಆದರೆ ನಾನು ನಿರ್ದೇಶಿಸಿರುವ ಕಾಮಿಡಿ ಜಾನರಿನ ಎರಡನೇ ಸಿನಿಮಾ ‘ಅಬ್ಬಬ್ಬ’. ಕುಟುಂಬ ಸಮೇತ ನೋಡಬಹುದಾದ ಪಕ್ಕ ಪೈಸಾ ವಸೂಲ್ ಸಿನಿಮಾ ಇದು.‌ ಫೆಬ್ರವರಿ 16 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ” ಎಂದರು ನಿರ್ದೇಶಕ ಕೆ.ಎಂ.ಚೈತನ್ಯ.

”ಇದೊಂದು ಹಾಸ್ಟೆಲ್ ನಲ್ಲಿ ನಡೆಯುವ ಕಾಮಿಡಿ ಜಾನರ್ ಕಥೆ.‌ ನನ್ನ ಪಾತ್ರ ಚೆನ್ನಾಗಿದೆ” ಎಂದರು ನಾಯಕ ಲಿಖಿತ್ ಶೆಟ್ಟಿ.

”ಬಾಯ್ಸ್ ಹಾಸ್ಟೆಲ್ ಹೇಗಿರುತ್ತದೆ ಎಂದು ನೋಡಲು ಹೋಗಿ ಪಜೀತಿ ಪಡುವ ಹುಡುಗಿಯ ಪಾತ್ರ ನನ್ನದು” ಎಂದು ನಾಯಕಿ ಅಮೃತ ಅಯ್ಯಂಗಾರ್ ತಿಳಿಸಿದರು.

ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಐಯ್ಯಂಗಾರ್, ಅಜಯ್ ರಾಜ್, ಧನರಾಜ್ ಆಚಾರ್, ತಾಂಡವ್ ರಾಮ್, ಶರತ್ ಲೋಹಿತಾಶ್ವ ಹಾಗು ವಿಜಯ್ ಚೆಂಡೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!