ವೃತ್ತಿಯಲ್ಲಿ ಫಾರ್ಮಾ(ಔಷಧಿ) ಕಂಪೆಸಿನಿಮಾದಲ್ಲಿ ಮ್ಯಾನೆಜರ್ ಆಗಿರುವ ರಾಮ್. ಜೆ. ಚಂದ್ರ ಪ್ರವೃತ್ತಿಯಲ್ಲಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದವರು. ಸದ್ಯ ವಸುಂಧರ ಕ್ರಿತಿಕ್ ಫಿಲಂಸ್ ಬ್ಯಾನರ್ ನಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರವನ್ನು ನಿರ್ಮಾಣ ಮಾಡುವ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಮತ್ತು ಹಾಡುಗಳು, ರಾಮ್ ಅವರ ಚೊಚ್ಚಲ ಚಿತ್ರ ‘ಆಟಕ್ಕೂ ಉಂಟು, ಲೆಕ್ಕಕ್ಕೂ ಉಂಟು’ ಎಂಬುದನ್ನು ಸಾಬೀತು ಪಡಿಸಿದೆ. ನಿರ್ದೇಶಕ ರಾಮ್, ‘Paranoid schizophrenia’ ಬೇಸ್ ಆಗಿಟ್ಟುಕೊಂಡು ಚಿತ್ರೀಕರಿಸಿದ ಚಿತ್ರದ ಟ್ರೈಲರ್ ಸಹಜವಾಗಿಯೇ ಅವರ ಸಿನ್ಮಾ ತಪಸ್ಸನ್ನು ಎತ್ತಿ ತೋರಿಸುತ್ತದೆ.
‘ನೋ ಯುವರ್ ಇನ್ನರ್ ಎನಿಮಿ’ ಎಂದು ಅಡಿಬರಹವನ್ನಿಟ್ಟುಕೊಂಡು, ನಟನೆಯ ಇನ್ನರ್&ಔಟರ್ ಎರಡನ್ನೂ ಅರಿತಿರುವ ಸಂಚಾರಿ ವಿಜಯ್ ಅವರನ್ನು ಚಿತ್ರದ ನಾಯಕ ನಟನನ್ನಾಗಿಸಿರುವ ರಾಮ್, ಕಲಾವಿದನ ಆಯ್ಕೆ ಮೂಲಕವೇ ಅರ್ಧ ಗೆದ್ದಾಗಿದೆ. ಇನ್ನು, ಚಿತ್ರದಲ್ಲಿ ಹಿರೋಯಿನ್ ಕೂಡ ಬಹುಮುಖ್ಯ ಪಾತ್ರ. ಆದಕ್ಕೇಂದೇ, ಇತ್ತೀಚಿಗೆ ತಮ್ಮ ಪರ್ ಫಾಮೆನ್ಸ್ ಮೂಲಕ ಸದ್ದು ಮಾಡುತ್ತಿರುವ ನಟಿ ಮಯೂರಿಯನ್ನು ರಾಮ್ ಕಾಷ್ಟಿಂಗ್ ಮಾಡಿದ್ದು ಸಾರ್ಥಕವಾಯಿತು ಎಂಬುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.
ನಿರ್ದೇಶಕ ರಾಮ್ ಚಿತ್ರರಂಗಕ್ಕೆ ಎಂಟ್ರಿಕೊಡೋದು ಸುಲಭದ ಹಾದಿಯಾಗಿರಲಿಲ್ಲ. ಯಾವುದಾದರೂ ಚಿತ್ರತಂಡದ ಜೊತೆಗೂಡಿ ಒಂದಷ್ಟು ಎಕ್ಸ್ಪೇಡರಿಯೆನ್ಸ್ ಪಡ್ಕೋಳ್ಳೋಣ ಅಂದರೆ, ಹೆಗಲ ಮೇಲಿದ್ದ ಕುಟುಂಬ ಭಾರ ಅನುವು ಮಾಡಿಕೊಡುತ್ತಿರಲಿಲ್ಲ. ಆದರೆ,ಫಿಲ್ಮ್ ಡೈರೆಕ ಮಾಡಲೇ ಬೇಕೆಂಬ ಮಹದಾಸೆ. ಇದಕ್ಕೆ ರಾಮ್ ಕಂಡುಕೊಂಡ ದಾರಿಯೆಂದರೆ, ಕೆಲಸದಲ್ಲಿ ಬಿಡುವಿದ್ದಾಗ ಶೂಟಿಂಗ್ ಸ್ಪಾಟ್ ಗಳಿಗೆ ಹೋಗಿ ನೋಡಿ ಕಲಿಯುವುದು. ಹೀಗೆ ಸತತ ಎರೂಡವರೆ ವರ್ಷಗಳ ಕಾಲ ಶೂಟಿಂಗ್ ಸ್ಪಾಟ್ ಗಳಿಗೆ ಹೋಗಿ ಸಿನಿಮಾದ ಗ್ರಾಮರ್ ಅನ್ನು ಕಲಿತುಕೊಂಡ ಇವರು, ಇಂದು ಚಿತ್ರವನ್ನು ರಿಲೀಸ್ ಹಂತದವರೆಗೂ ತಂದು ನಿಲ್ಲಿಸಿರೋದು ಸಣ್ಣ ಸಂಗತಿಯಲ್ಲ.ಚಿತ್ರದ ಕಥೆಯ ವಿಷಯಕ್ಕೆ ಬರುವುದಾದರೆ. ಹೇಳಿ ಕೇಳಿ ಫಾರ್ಮಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮ್, ಸಹಜವಾಗಿಯೇ ಸಾಕಷ್ಟು ಡಾಕ್ಟರ್ಗಾಳ ಜೊತೆ ಸಂಪರ್ಕದಲ್ಲಿರುತ್ತಿದ್ದರು. ಸೈಕಾಲಿಜಿಕಲ್ ಡಿಸಾರ್ಡರ್ಗೆದ ಸಂಬಂಧಿಸಿದ ಔಷಧಿಗಳನ್ನು ಡಾಕ್ಟರ್ಗ ಳಿಗೆ ವಿವರಿಸುತ್ತಿದ್ದ ರಾಮ್ ಅವರಿಗೆ ಡಾಕ್ಟರ್ ಒಬ್ಬರ ಕಡೆಯಿಂದ ರೋಗಿಯೊಬ್ಬರ ಬದುಕಿನ ಕುತೂಹಲಕಾರಿ ಸಂಗತಿಯೊಂದು ಗೊತ್ತಾಗುತ್ತದೆ. ಆ ಅಪರೂಪದ ಸಂಗತಿಯನ್ನೇ ಚಿತ್ರದ ಪ್ಲಾಟ್ ಮಾಡಿಕೊಂಡು ಕಥೆ ಮಾಡಿದ್ದಾರೆ. ಹೇಗಿದೆ, ನೋಡಿ ರಾಮ್ ಅವರ ವೃತ್ತಿಯೇ ಅವರನ್ನು ಅವರ ನೆಚ್ಚಿನ ಪ್ರವೃತ್ತಿಗೆ ಮೆಟ್ಟಿಲಾದ ಕಥೆ.
ಸಂತಸದ ಸಂಗತಿಯೆಂದರೇ, ಸ್ವಂತ ಕಲಿಕೆಯನ್ನೇ ನಂಬಿಕೊಂಡು ಚಿತ್ರ ನಿರ್ಮಿಸಿ-ನಿರ್ದೇಶಿಸಿರುವ ರಾಮ್, ಇನ್ನೂ ಮೊದಲ ಚಿತ್ರ ರಿಲೀಸ್ಗೂಿ ಮುನ್ನವೇ ಕ್ಯಾನ್ಸರ್ ರೋಗವೊಂದನ್ನು ಬೇಸ್ ಆಗಿಟ್ಟುಕೊಂಡು ಚಿತ್ರ ತಯಾರಿಸಲು ತಯಾರಿ ಆರಂಭಿಸಿದ್ದಾರೆ. `ಗಾಡ್ಫಾಿದರ್’ ಇಲ್ಲ ಎಂದು ಕೊರಗಿಕೊಂಡು ತಮ್ಮ ಕನಸನ್ನು ಕರಗಿಸಿಕೊಳ್ಳುವವರಿಗೆ ರಾಮ್ ಮಾದರಿಯಾಗಿದ್ದಾರೆ ಅಂದರೆ ತಪ್ಪಲ್ಲ. ಅಲ್ಲವೇ?
Be the first to comment