ನ.22 ರಂದು ‘ಆರಾಮ್ ಅರವಿಂದ ಸ್ವಾಮಿ’ ಬಿಡುಗಡೆ

ಅಭಿಷೇಕ್ ಶೆಟ್ಟಿ ಆಕ್ಷನ್‌ ಕಟ್‌ ಹೇಳಿರುವ ‘ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾ  ನವೆಂಬರ್‌ 22 ರಂದು ತೆರೆ ಕಾಣಲಿದೆ.

‘ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಜ್ಜಾಗುತ್ತಿದೆ.

ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಜೋಡಿಯಾಗಿದ್ದಾರೆ.  ಚಿತ್ರಕ್ಕೆ  ಅರ್ಜುನ್ ಸಂಗೀತ ನೀಡಿದ್ದು, ವೈವಿಬಿ ಶಿವಸಾಗರ್ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ   ಸಿನಿಮಾಗಿದೆ.

‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ಗುಳ್ಟು ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

‘ಆರಾಮ್‌ ಅರವಿಂದಸ್ವಾಮಿ’ ಹಾಡು ‘ಮುಂದೆ ಹೇಗೋ ಏನೋ ಎಂಬ ಹಾಡು  ಯೂಟ್ಯೂಬ್ ನಲ್ಲಿ ಇಂದು ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!