ಪುಷ್ಪ ಎದುರು ಬರುತ್ತಿದೆ ಕನ್ನಡದ ‘ ಆನ ‘

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಎದುರು ಅದಿತಿ ಪ್ರಭುದೇವ ನಟನೆಯ ಕನ್ನಡದ ಚಿತ್ರ ‘ಆನ’ ಡಿಸೆಂಬರ್ 17ರಂದು ಬಿಡುಗಡೆ ಆಗುತ್ತಿದೆ.

ಪುಷ್ಪ’ ಚಿತ್ರದಿಂದಾಗಿ ಕನ್ನಡದ ‘ಆನ’ ಸಿನಿಮಾಗೆ ರಾಜ್ಯದಲ್ಲಿ ಬೇಕಾದಷ್ಟು ಥಿಯೇಟರ್​ಗಳು ಸಿಗುತ್ತಿಲ್ಲ. ಆದರೂ ಧೈರ್ಯ ಮಾಡಿ ಈ ಚಿತ್ರವನ್ನು ರಿಲೀಸ್​ ಮಾಡಲು ನಿರ್ಮಾಪಕಿ ಪೂಜಾ ವಸಂತ್​ ಕುಮಾರ್​ ಮುಂದಾಗಿದ್ದಾರೆ. ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ಗೆಲ್ಲಲು ಕನ್ನಡಿಗರು ಬೆಂಬಲ ನೀಡಬೇಕು ಎಂದು ನಿರ್ದೇಶಕ ಮನೋಜ್​ ನಡಲುಮನೆ ವಿನಂತಿ ಮಾಡಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯನ್ನು ಇಟ್ಟುಕೊಂಡು ‘ಆನ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಭಾರತದ ಮೊದಲ ಮಹಿಳಾ ಸೂಪರ್​ ಹೀರೋ ಸಿನಿಮಾ ಎಂದು ಈ ಚಿತ್ರವನ್ನು ಚಿತ್ರತಂಡ ಕರೆದುಕೊಂಡಿದೆ. ವಿಶೇಷ ಶಕ್ತಿ ಇರುವ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

“ನನ್ನ ಪಾತ್ರದ ಬಗ್ಗೆ ಕೇಳಿದಾಗ ಎಗ್ಸೈಟ್​ ಆಯಿತು. ಮೊದಲು ನನ್ನಿಂದ ಈ ಪಾತ್ರ ಮಾಡಲು ಸಾಧ್ಯವೇ ಎನಿಸಿತ್ತು. ಒಟ್ಟಾರೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಬೇರೆ ಭಾಷೆಯ ಸಿನಿಮಾಗಳ ಎದುರು ಕನ್ನಡದ ಸಿನಿಮಾಗಳು ಸೊರಗುತ್ತಿದ್ದು, ಒಳ್ಳೆಯ ಕನ್ನಡ ಸಿನಿಮಾವನ್ನು ರಾಜ್ಯದ ಸಿನಿಪ್ರಿಯರು ಗೆಲ್ಲಿಸಬೇಕು’ ಎಂದು ಅದಿತಿ ಪ್ರಭುದೇವ ಕೋರಿದ್ದಾರೆ.

ಚಿತ್ರಕ್ಕೆ ರಿತ್ವಿಕ್​ ಮುರಳೀಧರ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸುನೀಲ್​ ಪುರಾಣಿಕ್​ ಅವರು ‘ಆನ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

“ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಪ್ರೇಕ್ಷಕರು ಥಿಯೇಟರ್​ಗೆ ಬಂದು ಈ ಸಿನಿಮಾ ನೋಡುತ್ತಾರೆ” ಎನ್ನುವ ಭರವಸೆಯನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!