ಬಾಲಿವುಡ್ ನಟ ಅಮಿರ್ ಖಾನ್ 59 ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ.
ಬೆಂಗಳೂರಿನ ಹುಡುಗಿಯೊಂದಿಗೆ ಅಮಿರ್ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಅಮಿರ್ ಖಾನ್ ಡೇಟ್ ಮಾಡುತ್ತಿರುವ ಬೆಂಗಳೂರಿನ ಯುವತಿಗೆ ಬಾಲಿವುಡ್ನೊಂದಿಗೆ ಯಾವುದೇ ಸಂಬಂಧವಿಲ್ಲ. ಅಮಿರ್ ಈ ಯುವತಿಯನ್ನು ತಮ್ಮ ಕುಟುಂಬ ಸದಸ್ಯರಿಗೆ ಪರಿಚಯಿಸಿದ್ದಾರೆ ಎಂದು ಮೂಲವೊಂದು ಹೇಳಿದೆ.
ಅಮಿರ್ ಖಾನ್, ರೀನಾ ದತ್ತಾ ಅವರನ್ನು 1996 ರಲ್ಲಿ ವಿವಾಹವಾದರು. 2002 ರಲ್ಲಿ 16 ವರ್ಷಗಳ ದಾಂಪತ್ಯ ಮುರಿದು ಬೇರ್ಪಟ್ಟರು. 4 ವರ್ಷ ಡೇಟಿಂಗ್ ಮಾಡಿದ ನಂತರ ಕಿರಣ್ ರಾವ್ ಅವರೊಂದಿಗೆ ಅಮಿರ್ ಖಾನ್ 2005ರಲ್ಲಿ ಎರಡನೇ ಮದುವೆ ಆದರು. 15 ವರ್ಷಗಳ ದಾಂಪತ್ಯವನ್ನು 2021ರಲ್ಲಿ ವಿಚ್ಛೇದನವನ್ನು ಘೋಷಿಸಿ ಕೊನೆಗೊಳಿಸಿದರು.
ಅಮೀರ್ ಖಾನ್ ಇತ್ತೀಚೆಗೆ ಮುಂಬೈನ ಬೀದಿಯಲ್ಲಿ ಭಿಕ್ಷುಕನ ವೇಷ ಧರಿಸಿ ಓಡಾಡುವ ಮೂಲಕ ಸುದ್ದಿಯಾಗಿದ್ದರು. ಈಗ ಮತ್ತೆ ಮೂರನೇ ಮದುವೆ ಆಗುವ ಸುದ್ದಿಯ ಮೂಲಕ ಜನರ ಬಾಯಿಗೆ ಆಹಾರ ಆಗಿದ್ದಾರೆ.

Be the first to comment