ಮುಂಬೈ ಬೀದಿಗಳಲ್ಲಿ ಇತ್ತೀಚೆಗೆ ದೊಡ್ಡ ಸ್ಟಾರ್ ನಟ ಒಬ್ಬರು ಭಿಕ್ಷುಕನ ವೇಷದಲ್ಲಿ ಓಡಾಡಿದ್ದು ವಿಡಿಯೋ ವೈರಲ್ ಆಗಿದೆ.
ಮಿಸ್ಟರ್ ಫರ್ಪೆಕ್ಷನಿಸ್ಟ್ ಆಮಿರ್ ಖಾನ್ ಗೆ ಭಿಕ್ಷುಕನಂತೆ ವೇಷ ಧರಿಸಿ ಮುಂಬೈನ ಗಲ್ಲಿಗಳಲ್ಲಿ ಓಡಾಡಿದ್ದಾರೆ. ವಿಡಿಯೋ ವೈರಲ್ ಆದಾಗ ಯಾರೋ ವಿಚಿತ್ರ ವ್ಯಕ್ತಿ ಮುಂಬೈ ಬೀದಿಗಳಲ್ಲಿ ಓಡಾಡಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಆಮಿರ್ ಖಾನ್ ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಮತ್ತು ಚಿತ್ರಗಳು ಹೊರಬಂದ ಬಳಿಕ ಮುಂಬೈ ಬೀದಿಗಳಲ್ಲಿ ಓಡಾಡಿದ ವ್ಯಕ್ತಿ ಆಮಿರ್ ಖಾನ್ ಎಂದು ತಿಳಿದಿದೆ.
ಭಿಕ್ಷುಕನಂತೆ ಉದ್ದನೆಯ ಗಡ್ಡ, ಕೂದಲು ಬಿಟ್ಟು, ಕಾಲಿಗೆ ಬೂಟು ಧರಿಸಿ ಮುಂಬೈನ ಬ್ಯುಸಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಕೈಗಾಡಿ ತಳ್ಳಿದ್ದಾರೆ. ರಸ್ತೆ ಬದಿ ಅಂಗಡಿಗಳ ಬಳಿ ಹೋಗಿ ಊಟ ಕೇಳಿದ್ದಾರೆ. ಭಿಕ್ಷುಕನ ಅವತಾರ ನೋಡಿ ಕೆಲವರು ವ್ಯಕ್ತಿಯಿಂದ ದೂರ ಓಡಿದ್ದಾರೆ. ಆದರೆ ಭಿಕ್ಷುಕ ಯಾರೆಂಬುದನ್ನು ಯಾರೂ ಗುರುತಿಸಿಲ್ಲ.
ಆಮಿರ್ ಖಾನ್ ವಿಚಿತ್ರ ವೇಷ ತೊಟ್ಟು ಮುಂಬೈ ಬೀದಿಗಳಲ್ಲಿ ಓಡಾಡಿದ್ದು ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಯಾವುದೋ ಸಿನಿಮಾಕ್ಕಾಗಿ ಇರಬಹುದು ಎಂದಿದ್ದಾರೆ. ಇನ್ನು ಕೆಲವರು ಇದು ಜಾಹೀರಾತಿಗಾಗಿ ಆಗಿರಬಹುದು ಎಂದಿದ್ದಾರೆ.
ಈ ಹಿಂದೆ ಸಹ ಆಮಿರ್ ಖಾನ್ ಹೀಗೆ ವೇಷ ಮರೆಸಿ ನಗರಗಳ ಬೀದಿಯಲ್ಲಿ ಓಡಾಡಿದ್ದರು. ವೇಷ ಬದಲಾಯಿಸಿ ಕೆಲವು ಸೆಲೆಬ್ರಿಟಿಗಳನ್ನು ಫೂಲ್ ಮಾಡಿದ್ದರು. ವೇಷ ಬದಲಿಸಿ ಸೌರವ್ ಗಂಗೂಲಿಯ ಮನೆಗೆ ಆಮಿರ್ ಖಾನ್ ಭೇಟಿ ನೀಡಿದ್ದರು.
Be the first to comment