aadipurush: ಭಾರತಕ್ಕಿಂತ ಮೊದಲು ಆದಿಪುರುಷ್‌ ಅಮೆರಿಕದಲ್ಲಿ ಬಿಡುಗಡೆ

ಪ್ರಬಾಸ್‌ ನಟನೆಯ ಬಹುನಿರೀಕ್ಷಿತ ಚಿತ್ರ ಆದಿಪುರುಷ್‌ ಭಾರತಕ್ಕಿಂತ ಮೊದಲು ಅಮೆರಿಕಾದಲ್ಲಿ ರಿಲೀಸ್ ಆಗಲಿದೆ.

ಜೂನ್ 13 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಟ್ರಿಬೆಕಾ ಫೆಸ್ಟಿವಲ್​ನಲ್ಲಿ ಆದಿಪುರುಷ ಸಿನಿಮಾ ಪ್ರಥಮ ಪ್ರದರ್ಶನ ಕಾಣಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.

ಭಾರತದಲ್ಲಿ ಚಿತ್ರ 16 ಜೂನ್ 2023 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ರಾಮಾಯಣ ಆಧಾರಿತ ಈ ಸಿನಿಮಾವನ್ನು ರೆಟ್ರೋ ಫೈಲ್ಸ್ ಕಂಪನಿಯೊಂದಿಗೆ ಟೀ ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ಅವರು ದೊಡ್ಡ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ.

‘ಆದಿಪುರುಷ’ ಚಿತ್ರವನ್ನು ಸಂಪೂರ್ಣವಾಗಿ ಗ್ರೀನ್ ಮ್ಯಾಟ್ ಮೇಲೆ ಚಿತ್ರೀಕರಿಸಲಾಗಿದೆ. ಸದ್ಯ ಈ ಸಿನಿಮಾದ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. 400 ಕೋಟಿ . ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಈ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ತೀವ್ರ ಟೀಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಿನಿಮಾದಲ್ಲಿ ಸಂಪೂರ್ಣ ಗ್ರಾಫಿಕ್ಸ್ ವರ್ಕ್ ಚೇಂಜ್ ಮಾಡಲಾಗುತ್ತಿದೆ.
ಸಾಹೋ ಮತ್ತು ರಾಧೆ ಶ್ಯಾಮ್ ನಂತರ ಪ್ರಭಾಸ್ ಆದಿಪುರುಷ ಎಂಬ ಸಿನಿಮಾ ಮಾಡುತ್ತಿದ್ದು, ಇದು ದೊಡ್ಡ ಮಟ್ಟದ ನಿರೀಕ್ಷೆ ಹೊಂದಿದೆ.
—-

Be the first to comment

Leave a Reply

Your email address will not be published. Required fields are marked *

Translate »
error: Content is protected !!