ಸಿನಿಮಾ ಜೊತೆ ಜೊತೆಗೆ ತನ್ನ ಸ್ನೇಹಿತರು ಹಾಗೂ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡುವ ‘ವಿಕ್ರಾಂತ್ ರೋಣ’ ಇದೀಗ ಹೊಸ ಪ್ರತಿಭೆಗಳ ಸಿನಿಮಾಗೆ ಕೈ ಜೋಡಿಸಿದ್ದಾರೆ. ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿರುವ ಅಬ್ಬಬ್ಬ ಸಿನಿಮಾದ ಟ್ರೇಲರ್ ನೋಡಿ ಕಿಚ್ಚ ಮೆಚ್ಚಿಕೊಂಡಿದ್ದಾರೆ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಮೆಚ್ಚಿಕೊಳ್ಳುವ ಸುದೀಪ್ ಈ ಸಿನಿಮಾದ ಟ್ರೈಲರ್ಗೆ ಫಿದಾ ಆಗಿದ್ದು, ತಮ್ಮ ಟ್ಟಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಒಂದು ಅದ್ಭುತವಾದ ಕಾಮಿಡಿ ಸಿನಿಮಾ. ಇದು ಸಾಮಾನ್ಯವಾಗಿ ಬಂದ ಕಾಮಿಡಿ ಚಿತ್ರ ಅಲ್ಲ. ಯೂತ್ ಫುಲ್ ಕಂಟೆಂಟ್ ಇರುವ ಇತ್ತೀಚಿನ ದಿನಗಳಿಗೆ ಅಪರೂಪದ ಚಿತ್ರ ಎಂದು ಸುದೀಪ್ ಹೇಳಿದ್ದಾರೆ. ಮೀರಾಮಾರ್ ಸಂಸ್ಥೆಯ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ಕೆ.ಆರ್.ಜಿ ಸಂಸ್ಥೆಯ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜುಲೈ 1ರಂದು ಸಿನಿಮಾ ತೆರೆ ಕಾಣಲಿದೆ.
Happy to launch the trailer of #Abbabba… 🥂
Best wshs 🥂
Here's the link to #AbbabbaTrailer🔗https://t.co/Z6pY4BwifH@kmchaitanya @LikithShetty @amrutha_iyengar @actorajayraj #ThandavRam @AcharDhanraj #AnnAugustine #VivekThomas @allok02 @KRG_Studios @KRG_Connects
— Kichcha Sudeepa (@KicchaSudeep) June 9, 2022

Be the first to comment